ಕೇರಳ: ಕೇರಳದಲ್ಲಿ 50 ವರ್ಷದ ಮಹಿಳೆ ತನ್ನ 16 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಲಾಗಿದೆ.
ಆಕೆಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದ್ದು. ತನ್ನ ಮಗುವನ್ನು ರಕ್ಷಿಸಬೇಕಿರುವ ತಾಯಿಯೂ ಕೂಡ ಮಗಲನ್ನು ಶೋಷಣೆಗೆ ಒಳಪಡಿಸಿದ್ದಾರೆ ಮತ್ತು ಮಗುವಿನ ತಂದೆ ಹಾಸಿಗೆ ಹಿಡಿದಿರುವ ಪರಿಸ್ಥಿತಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ.
ಕಯನಾಡು ಮೂಲದ ಮೂವಾಟ್ಟುಪುಳ ಮೂಲದ ತಾಯಿ ಮತ್ತು ಆಕೆಯ ಸ್ನೇಹಿತ ಅರುಣ್ ಕುಮಾರ್ (36) ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಅರುಣ್ ಕುಮಾರ್ ಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಲಾಗಿದೆ. ಮಹಿಳೆ ಯಾವುದೇ ವಿನಾಯತಿಗೆ ಅರ್ಹಳಲ್ಲ ಎಂದು ನ್ಯಾಯಾಲವು ತಿಳಿಸಿದೆ.
ಮಾರ್ಚ್ 2017 ರಿಂದ ಆಗಸ್ಟ್ 2017 ರ ಅವಧಿಯಲ್ಲಿ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಲಾಗಿದೆ. ಅರುಣ್ ಕುಮಾರ್ ಅವರು ನಿತ್ಯ ಭೇಟಿ ನೀಡುತ್ತಿದ್ದರು ಮತ್ತು ಅವರು ಬಾಲಕಿಯನ್ನು ಇಡುಕ್ಕಿಯ ಪಲ್ಲಿವಾಸಲ್‌ಗೆ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಮತ್ತು ತನಿಖೆ ವೇಳೆ ತಾಯಿಯೇ ಇದಕ್ಕೆ ಕುಮ್ಮಕ್ಕು ನೀಡಿರುವುದು ಪತ್ತೆಯಾಗಿದೆ.
“ಅವಳು ಹೆಣ್ಣು ಮಗುವಿನ ತಾಯಿ, ಅವಳ ರಕ್ಷಕನಾಗಬೇಕಿದ್ದ ಅವಳೇ ಹಲ್ಲೆಗೆ ಕುಮ್ಮಕ್ಕು ನೀಡಿದಳು” ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗಳು IPC, POCSO ಕಾಯಿದೆ ಮತ್ತು ಬಾಲಾಪರಾಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯವು ತಿಳಿಸಿದೆ. ಅಪರಾಧಿಗಳಿಂದ ಪಡೆದ ದಂಡದ ಮೊತ್ತವನ್ನು ಸಂತ್ರಸ್ತರಿಗೆ ಒದಗಿಸಲಾಗುವುದು.