Advertisement

ಕರಾವಳಿಯಲ್ಲಿ ಮುಂದುವರಿದ ಹೀನ ಕೃತ್ಯ: ಕಾಣಿಕೆ ಡಬ್ಬಿಗಳೇ ಟಾರ್ಗೆಟ್!

03:26 PM Jan 20, 2021 | Team Udayavani |

ಉಳ್ಳಾಲ: ಕರಾವಳಿಯ ಕೆಲವೆಡೆ ದೇವಾಲಯಗಳ, ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಪ್ರಚೋದನಕಾರಿ ಬರಹಗಳು ಸೇರಿದಂತೆ ಇತರೆ ವಸ್ತುಗಳನ್ನು ಹಾಕುವ ಗುಂಪೊಂದು ಸಕ್ರೀಯವಾಗಿದೆ. ಕಳೆದ ಕೆಲ ದಿನಗಳಿಂದ ಮಂಗಳೂರು ಭಾಗದಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯಗಳು ಮತ್ತೆ ಮತ್ತೆ ನಡೆಯುತ್ತಿವೆ.

Advertisement

ಕಾಣಿಕೆ ಹುಂಡಿಗಳಲ್ಲಿ ಪ್ರಚೋದನಕಾರಿ ಬರಹಗಳ ಕರಪತ್ರ, ಕಾಂಡೋಮ್ ಗಳನ್ನು ಕಿಡಿಗೇಡಿಗಳು ಹಾಕುತ್ತಿರುವುದು ಬೆಳಕಿಗೆ ಬರುತ್ತಿದೆ. ಇದರ ನಡುವೆ ಇದೀಗ ಕೊಣಾಜೆ ಠಾಣಾ ವ್ಯಾಪ್ತಿಯ ಮುಲಾರ ಗೋಪಾಲಕೃಷ್ಣ ಮಂದಿರದಲ್ಲಿ ಕಿಡಿಗೇಡಿಗಳು ಭಗವಧ್ವಜ ನೆಲಕ್ಕೆಸೆದು ಮಲಮೂತ್ರ ವಿಸರ್ಜಿಸಿದ ಘಟನೆಯೂ ನಡೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು ನಗರದ ಕೊಟ್ಟಾರದ ಬಬ್ಬುಸ್ವಾಮಿ ದೈವಸ್ಥಾನ, ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯಲ್ಲಿ ವಾರದ ಹಿಂದೆ ಇಂತಹ ಘಟನೆಗಳು ವರದಿಯಾಗಿತ್ತು. ಇದೀಗ ಉಳ್ಳಾಲದ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿತ್ತು.

ಇದನ್ನೂ ಓದಿ:ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

Advertisement

ರಾಜಕಾರಣಿಗಳ ವಿರುದ್ಧ ಬರಹ: ಉಳ್ಳಾಲದ  ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಗಳನ್ನು ಹಾಕಿದ್ದಲ್ಲದೆ, ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಅಮಿತ್ ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹ ಬರೆದು ವಿಕೃತಿ ಮೆರೆದಿದ್ದಾರೆ. ಈ ಹಿಂದೆ ಕೊಟ್ಟಾರದಲ್ಲೂ ಇಂತಹದೇ ಬರಹಗಳು ಪತ್ತೆಯಾಗಿದ್ದವು.

ದೇವಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿವೆ, ಎಚ್ಚರ. ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ, ಬಾಚಿ ತಿಂದು ತೇಗುವ ಈ ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆದು, ಹಿಡಿದು ಕೊಲ್ಲಬೇಕಾಗಿದೆ. ಜನರು ಸಿದ್ಧರಾಗಬೇಕು ಎಂದು ಅದರಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ

ಸಿಸಿ ಕ್ಯಾಮರಾ ಇಲ್ಲದ ಕಡೆ ಟಾರ್ಗೆಟ್: ಕಿಡಿಗೇಡಿಗಳು ಇದುವರೆಗೆ ನಾಲ್ಕು ಕಡೆಗಳಲ್ಲಿ ಇಂತಹ ಕುಕೃತ್ಯ ನಡೆಸಿದ್ದು, ಸಿಸಿ ಕ್ಯಾಮರಾ ಇಲ್ಲದ ದೈವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಾಣಿಕೆ ಡಬ್ಬಿಗೆ ಈ ವಸ್ತುಗಳನ್ನು ಹಾಕುವುದರಿಂದ ಕೃತ್ಯ ಬೇಗನೇ ಬೆಳಕಿಗೆ ಬರುವುದಿಲ್ಲ. ಸಿಸಿ ಕ್ಯಾಮರಾ ಕೂಡಾ ಇಲ್ಲದಿರುವ ಕಾರಣ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೂ ಹಿನ್ನಡೆಯಾಗಿದೆ.

ಉಳ್ಳಾಲ ಸಾರ್ವಜನಿಕ ಶ್ರೀ ಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿಗೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸಗಳನ್ನು ಯಾರೂ ಮಾಡಬಾರದು. ಎಲ್ಲಾ ದೇವಸ್ಥಾನ/ ದೈವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇಲ್ಲವಾದಲ್ಲಿ ಇಂತಹ ಕೃತ್ಯ ನಡೆದಾಗ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next