Advertisement
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆ ಬಸವಂತರಾಯ ಪದವಿ ಪೂರ್ವ ಅನುದಾನಿತ ಕಾಲೇಜಿನ ಅಧ್ಯಕ್ಷ ನಳಿನಿಕಾಂತ ಸಾವಂತ ವಿರುದ್ಧ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಬಳಿಕ ರಸ್ತೆ ಸಂಚಾರ ಸುಗಮಗೊಳಿಸಿದರು. ರಸ್ತೆ ಸಂಚಾರ ಸ್ಥಗಿತ ಹೋರಾಟ ಹಿಂಪಡೆದರೂ ಪ್ರತಿಭಟನೆ ಮುಂದುವರಿ ಸಿದ ಮಕ್ಕಳು, ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೋರಾಟ ಮುಂದುವರಿಸಿದರು.
ಪ್ರೌಢ ಶಾಲಾ ಮಕ್ಕಳಿಗೆ ಮತ್ತು ಸಹ ಶಿಕ್ಷಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಾರೆ. ಬಿಸಿ ಊಟದ ಸಮರ್ಪಕ ಪೂರೈಕೆ ಇಲ್ಲ, ಇದ್ದಾಗ ಶುಚಿತ್ವ ಹಾಗೂ ಸ್ವಾದಿಷ್ಟ ಆಹಾರ ನೀಡುತ್ತಿಲ್ಲ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಸಮಸ್ಯೆ ನಿವೇದಿಸಿ, ಸೌಲಭ್ಯಕ್ಕೆ ಮನವಿ ಮಾಡಿದರೆ ವಿದ್ಯಾರ್ಥಿಗಳನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿದರು.
ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸಾವಂತ ಕೂಡಲೇ ರಾಜೀನಾಮೆ ನೀಡುವಂತೆ ಪಟ್ಟು ಬಿಡದ ವಿದ್ಯಾರ್ಥಿಗಳ ಬೇಡಿಕೆಗೆ ಗ್ರಾಮಸ್ಥರು ಬಂಬಲಕ್ಕೆ ನಿಂತರು. ಇದರಿಂದ ಸ್ಥಳದಲ್ಲಿ ಕೆಲಕಲಾ ಪರಿಸ್ಥಿತಿ ವಿಕೋಪಕ್ಕೆ ಏರಿತು. ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪ್ರತಿಭಟನಾ ನಿರತ ಮಕ್ಕಳ ಮನವೊಲಿಸಲು ಪ್ರಯತ್ನ ನಡೆಸಿದರು.
ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ಮೊಸಲಗಿ, ತಾಪಂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಂಜೀವ ಹುಲ್ಲೋಳ್ಳಿ, ಶಿಕ್ಷಣ ಸಂಯೋಜಕರು, ಪಿಡಿಒ ಬಿ.ಪಿ. ಉಪ್ಪಲದ್ದಿನ್ನಿ, ಪೊಲೀಸ್ ಇಲಾಖೆಯವರು ಸೇರಿ ಪರಿಸ್ಥಿತಿ ನಿಭಾಯಿಸಲು ಹೆಣಗುವಂತಾಯಿತು.