Advertisement

Kumble: ಬಸ್‌ನಲ್ಲಿ ಅನುಚಿತ ವರ್ತನೆ: ದೂರು; ಪ್ರಕರಣ ದಾಖಲು

12:43 AM Sep 22, 2023 | Team Udayavani |

ಕುಂಬಳೆ: ಕಾಸರಗೋಡಿನಿಂದ ಕುಂಬಳೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಸುಮಾರು 40 ವರ್ಷ ಪ್ರಾಯದ ವ್ಯಕ್ತಿ ಯೊರ್ವ ಅನುಚಿತವಾಗಿ ವರ್ತಿಸಿದ ಬಗ್ಗೆ ಯುವತಿಯೊಬ್ಬಳು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಬಸ್‌ನಲ್ಲಿ ಅನುಚಿತವಾಗಿ ವರ್ತಿಸಿದ ಯುವಕ ಬಸ್‌ ಕುಂಬಳೆಗೆ ತಲುಪುತ್ತಿದ್ದಂತೆ ಬಸ್‌ನಿಂದ ಇಳಿದು ಪರಾರಿಯಾಗಿದ್ದಾನೆ. ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಕಂಡರೆ ಗುರುತು ಪತ್ತೆ ಹಚ್ಚಬಹುದೆಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯನ್ನು ಪತ್ತೆ ಹಚ್ಚಲು ಕುಂಬಳೆ ಬಸ್‌ ನಿಲ್ದಾಣ ಹಾಗೂ ಸಮೀಪ ಪ್ರದೇಶಗಳ ಸಿಸಿ ಟಿವಿ  ಕೆಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next