Advertisement

ಮಿಸ್ಬಾ ಝರಾತುಲ್ ಖುರ್‌-ಆನ್‌ ಫ್ರೀ ಸ್ಕೂಲ್: ಪ್ರಾರಂಭೋತ್ಸವ ಅಲೀಫ್‌ ಡೇ

01:11 AM Jun 25, 2019 | Sriram |

ಕಾಟಿಪಳ್ಳ: ಮಿಸ್ಬಾ ನಾಲೇಜ್‌ ಫೌಂಡೇಶನ್‌ ಒಂದು ಸಮಾಜಮುಖೀಯಾದ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಉದ್ಯಮಿ ಡಾ| ಟಿ.ಎಂ. ಅಬ್ದುಲ್ ರವೂಫ್‌ ಹೇಳಿದರು.

Advertisement

ಮಿಸ್ಬಾ ನಾಲೇಜ್‌ ಫೌಂಡೇಶನ್‌ ಇದರ ವತಿಯಿಂದ ನೂತನವಾಗಿ ಪ್ರಾರಂಭವಾದ ಮಿಸ್ಬಾ ಝರಾತುಲ್ ಖುರ್‌-ಆನ್‌ ಫ್ರೀ ಸ್ಕೂಲ್ ಇದರ ಪ್ರಾರಂಭೋತ್ಸವ ಅಲೀಫ್‌ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಡವರ್ಗದವರಿಗೆ ಮಾಡುತ್ತಿರುವ ಈ ಶೈಕ್ಷಣಿಕ ಸೇವೆ ಎಲ್ಲರಿಗೂ ಮಾದರಿ. ಇದು ವಿದ್ಯಾರ್ಥಿನಿಯರ ಭವಿಷ್ಯವನ್ನು ರೂಪಿಸುತ್ತಿದೆ. ಯಾವುದೇ ಆರ್ಥಿಕ ಲಾಭವಿಲ್ಲದೆ ನಡೆಸುತ್ತಿರುವ ಈ ಸಂಸ್ಥೆ ಇನ್ನಷ್ಟು ಹೆಸರನ್ನು ಮಾಡಲಿ ಎಂದು ಹಾರೈಸಿದರು.

ಸಮ್ಮಾನ
ಮಿಸ್ಬಾ ಕಾಲೇಜಿನ ಪದವಿ ವಿಭಾಗದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವು ನಡೆಸಿದ ಬಿ.ಎ., ಬಿಕಾಂ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾ ರ್ಥಿನಿಯರನ್ನು ಇದೇ ಸಂದರ್ಭ ಸಮ್ಮಾ ನಿಸಿದರು. ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಝಿಯಾವುದ್ಧೀನ್‌ ಮಾತನಾಡಿ, ಬಡ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಪ್ರಶಂಸನೀಯ. ಇದರಿಂದಾಗಿ ಇನ್ನಷ್ಟು ವಿದ್ಯಾರ್ಥಿನಿಯರು ಶಿಕ್ಷಣವನ್ನು ಪಡೆಯುವ ಹಾಗೆ ಆಗಲಿ ಎಂದು ಶುಭ ಕೋರಿದರು.

ಕಾಲೇಜಿನ ಟ್ರಸ್ಟಿ, ಧಾರ್ಮಿಕ ವಿದ್ವಾಂ ಸರಾದ ಅಬೂ ಸೂಫಿಯಾನ್‌ ಮಿಸ್ಬಾ ಝರಾತುಲ್ ಖುರ್‌-ಆನ್‌ ಫ್ರೀ ಸ್ಕೂಲ್ ಇದನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಬೇಕಾಗಿದೆ. ಶಿಕ್ಷಣದ ಜತೆಗೆ ಧರ್ಮವನ್ನು ಬೋಧಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

Advertisement

ಉದ್ಯಮಿ ಅಶ್ರಫ್‌, ಮಿಸ್ಬಾ ನಾಲೇಜ್‌ ಫೌಂಡೇಶನ್‌ನ ಅಧ್ಯಕ್ಷ ಮಮ್ತಾಜ್‌ ಆಲಿ, ಅಬ್ದುಲ್ ಹಮೀದ್‌, ಇಕ್ಬಾಲ್ ಬಿ.ಎ., ಉದ್ಯಮಿ ಹಮೀದ್‌, ಕಾಲೇಜಿನ ಸಂಚಾ ಲಕರಾದ ಬಿ.ಎ. ನಜೀರ್‌, ಟ್ರಸ್ಟಿಗಳಾದ ಅಬ್ದುಲ್ ಹಕೀಮ್‌ ಫಾಲ್ಕನ್‌, ಅಬ್ದುಲ್ ನಾಸಿರ್‌ ಲಕ್ಕಿಸ್ಟಾರ್‌, ಅಬ್ದುಲ್ ಹಮೀದ್‌ ಅಶ್ಕಾಫ್‌, ಬಾವ ಫಕ್ರುದ್ದೀನ್‌, ಟಿ.ಎಚ್. ಮೆಹಬೂಬ್‌, ಮೌಲಾನ ಹಬೀಬ್‌ ಸಖಾಫಿ, ಮೌಲಾನ ಅಶ್ರಫ್‌ ಸಖಾಫಿ, ಮೌಲಾನ ಹನೀಫ್‌ ಸಖಾಫಿ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಝಾಹಿದಾ ಜಲೀಲ್ ಪ್ರಾಸ್ತಾವಿಕ ಮಾತು ಗಳನ್ನಾ ಡಿದರು. ಉಪ ಪ್ರಾಂಶುಪಾಲೆ ಸನಾ ಹುಸೈನ್‌ ನಿರ್ವಹಿಸಿದರು. ಮಮತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next