Advertisement
ಇರಲಿ; ಅಷ್ಟು ಹೊತ್ತಿಗೆ ಕುದುರೆಯ ಮೇಲೇರಿ ಒಬ್ಟಾತ ಅಲ್ಲಿಗೆ ಬಂದ. ಅರಳಿ ಕಟ್ಟೆಯ ಬಳಿಗೆ ಬಂದವನೇ ಕಡಿವಾಣ ಎಳೆದು ಕುದುರೆ ನಿಲ್ಲಿಸಿ ಆತ ವೃದ್ಧರನ್ನು ಉದ್ದೇಶಿಸಿ ಕೇಳಿದ, “ಈ ಊರು ಹೇಗಿದೆ? ಜನರು ಎಂಥವರು?’“ಈ ಪ್ರಶ್ನೆಯನ್ನು ನೀನು ಕೇಳುತ್ತಿರು ವುದರ ಉದ್ದೇಶವೇನು?’ ವೃದ್ಧರಲ್ಲಿ ಒಬ್ಬರು ಮರುಪ್ರಶ್ನೆ ಹಾಕಿದರು.
“ಸರಿ, ನೀನು ಬಿಟ್ಟು ಬಂದ ಊರು ಹೇಗಿತ್ತು? ಜನರು ಹೇಗಿದ್ದರು?’ ವೃದ್ಧರು ಮತ್ತೂಂದು ಪ್ರಶ್ನೆ ಎಸೆದರು. “ಅಯ್ಯೋ ಹೇಳಿ ಸುಖವಿಲ್ಲ. ಅಲ್ಲೆಲ್ಲ ಮತ್ಸರಿಗಳು, ದುಷ್ಟರು, ಮೂರ್ಖರೇ ತುಂಬಿದ್ದಾರೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಎಲ್ಲರೂ ಪರಸ್ಪರ ದೂರು ಹೇಳಿಕೊಳ್ಳುತ್ತ ಜಗಳ ವಾಡಿಕೊಂಡೇ ಇರುವವರು. ಹಾಗಾ ಗಿಯೇ ನಾನು ಆ ಊರನ್ನು ಬಿಟ್ಟು ಬರಬೇಕಾಯಿತು. ಈಗ ಹೇಳಿ, ಈ ಊರಿನ ಬಗ್ಗೆ’ ಎಂದ ಬಂದಾತ.
Related Articles
Advertisement
ಅಶ್ವಾರೋಹಿ ಮುಂದಕ್ಕೆ ನಡೆದ. ವೃದ್ಧರು ಮಾತುಕತೆ ಮುಂದುವರಿಸಿ ದರು. ಸ್ವಲ್ಪ ಹೊತ್ತಿನಲ್ಲಿ ಎತ್ತಿನಬಂಡಿ ಯೊಂದು ಆ ದಾರಿಯಾಗಿ ಸಾಗಿಬಂತು. ಅರಳಿಕಟ್ಟೆಯ ಬಳಿಯೇ ಅದು ನಿಂತಿತು. ಗಾಡಿಯಲ್ಲಿದ್ದ ಮಧ್ಯವಯಸ್ಕ ನೊಬ್ಬ ಕೆಳಕ್ಕಿಳಿದು ವೃದ್ಧರ ಬಳಿಗೆ ಬಂದ. ಬಾಗಿ ನಮಸ್ಕರಿಸಿ, “ಹಿರಿಯರೇ, ನೀವು ಈ ಊರಿನವರು ಎಂದುಕೊಂಡಿದ್ದೇನೆ. ಹೇಗಿದೆ ನಿಮ್ಮೂರು? ಇಲ್ಲಿನ ನಾಗರಿ ಕರು ಎಂಥವರು?’ ಎಂದು ಪ್ರಶ್ನಿಸಿದ.
ವೃದ್ಧರು ಎಲ್ಲಿಂದ ಬಂದೆ, ಯಾಕೆ ಬಂದೆ, ಇಲ್ಲಿನವರ ಬಗ್ಗೆ ಕೇಳಿದ್ದೇಕೆ ಎಂದು ವಿಚಾರಿಸಿದರು.ಬಂದಾತ ಹೇಳಿದ, “ಅನಿವಾರ್ಯ ಕಾರಣ ಗಳಿಂದ ನನ್ನೂರನ್ನು ಬಿಟ್ಟು ಹೊರಡಬೇಕಾ ಯಿತು; ವ್ಯಾಪಾರದಲ್ಲಿ ನಷ್ಟವುಂಟಾಗಿ. ಆದರೆ ನನ್ನೂರಿನವರು ಸುಸಂಸ್ಕೃತರು, ಪರೋಪಕಾರಿಗಳು. ನಾನು ಹೊರಡು ವುದಕ್ಕೆ ಸಮ್ಮತಿಸಲೇ ಇಲ್ಲ, ನಾನು ಮಾಡಿರುವ ಸಾಲಗಳನ್ನು ತಾವೇ ತೀರಿಸುವೆವು ಎಂದರು. ಆದರೆ ನಾನು ಒಪ್ಪಲಿಲ್ಲ. ಈ ಊರಿನವರೂ ಅಂಥ ವರೇ ಆಗಿದ್ದಾರೆ ಎಂದಾದರೆ ಸ್ವಲ್ಪ ಕಾಲ ಇಲ್ಲಿ ನೆಲೆಸು ತ್ತೇನೆ. ಹಣಕಾಸಿನ ಸ್ಥಿತಿಗತಿ ಸರಿಹೋದ ಮೇಲೆ ಮತ್ತೆ ನನ್ನೂರಿಗೆ ಹೋಗುತ್ತೇನೆ. ನನ್ನ ಕೊನೆಗಾಲವನ್ನು ಅಲ್ಲೇ ಕಳೆಯ ಬೇಕು ಎಂಬುದು ನನ್ನಾಸೆ…’ ಇಷ್ಟು ಹೇಳುವಷ್ಟರಲ್ಲಿ ಬಂದಾ ತನ ಕೆನ್ನೆಗಳಿಂದ ದುಃಖಾಶ್ರುಗಳು ಉರುಳುತ್ತಿದ್ದವು. ವಯೋವೃದ್ಧರು ಅಗಸೆ ಬಾಗಿಲನ್ನು ಅಗಲವಾಗಿ ತೆರೆದರು, “ಬಾ ತಮ್ಮಾ. ಇದೇ ನಿನ್ನೂರು ಎಂದುಕೋ. ಇಷ್ಟ ಬಂದಷ್ಟು ಕಾಲ ಇಲ್ಲಿರು…’ ಸಮಾಜ ನಮ್ಮ ಮುಖಕ್ಕೆ ಹಿಡಿದ ಕನ್ನಡಿ ಇದ್ದಂತೆ. ನಾವು ಇರುವ ಹಾಗೆ, ನಾವು ಕಾಣುವ ಹಾಗೆ ನಮ್ಮ ಸುತ್ತ ಮುತ್ತಲಿನ ಜನರು ಕೂಡ ಇರುತ್ತಾರೆ, ಕಾಣುತ್ತಾರೆ. ನಮ್ಮಲ್ಲಿ ದುರ್ಗುಣ ಗಳಿದ್ದರೆ ಸಮಾಜವೆಂಬ ಕನ್ನಡಿಯ ಲ್ಲಿಯೂ ಅವೇ ಪ್ರತಿಫಲಿಸುತ್ತವೆ. ಸದಾ ಶಯ, ಸದ್ಗುಣ, ಸಕಾರಾತ್ಮಕ ನಿಲುವು ಇತ್ಯಾದಿಗಳ ಬೆಳಕು ನಮ್ಮಲ್ಲಿದ್ದರೆ ಕನ್ನಡಿಯಲ್ಲಿಯೂ ಅದೇ ಕಾಣಿಸುತ್ತದೆ. ಚೆನ್ನಾಗಿರಬೇಕಾದ್ದು, ಬದಲಾಗ ಬೇಕಾದ್ದು ಒಳಗಿನಿಂದ. ಆಗ ಪ್ರತಿ ಬಿಂಬವೂ ಬದಲಾಗುತ್ತದೆ.