ಬಳ್ಳಾರಿಯ ಈ ತಾಲೂಕು ಕೇಂದ್ರವು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಕಾಲಿಟ್ಟ ನಂತರ ಪವಾ ಡ ಗಳು ಘಟಿಸಿದವು ಎನ್ನು ವುದು ಪ್ರತೀತಿ. ದೀನ- ದುರ್ಬಲ ರಿಗೆ ಪವಾಡ ಮಾಡಿ ಕೊಡುತ್ತಾ, “ಕೊಡುವ ಊರು’ ಅಂತಲೇ ಖ್ಯಾತಿ ಪಡೆದು, ನಂತರ ಇದು “ಕೊಟ್ಟೂರು’ ಆಯಿತು. ಅದಕ್ಕೂ ಮೊದಲು ಈ ಊರು “ಶಿಖಾಪುರ’ ಆಗಿತ್ತು. ಆಗ ಇಲ್ಲಿ ನೆಲೆ ಸಿದ್ದವೀರ ಭದ್ರೇಶ್ವರ ಸ್ವಾಮಿ ನೆಲೆಸಿದ್ದರಂತೆ. ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು, ಊರೂರು ಸುತ್ತಾ ಡುತ್ತಾ, ಶಿಖಾಪುರಕ್ಕೆ ಬಂದಾಗ, ತಡ ರಾತ್ರಿಯಾಗಿತ್ತಂತೆ. “ಇಂದು ರಾತ್ರಿ ನಾನು ಇಲ್ಲಿಯೇ ತಂಗಬಹುದೇ?’ ಎಂದು ವೀರ ಭದ್ರೇಶ್ವರ ಸ್ವಾಮಿಯ ಬಳಿ, ಕೊಟ್ಟೂರು ಸ್ವಾಮಿಯು ಕೇಳಲು, ಮಲಗಲು ಅನುಮತಿ ದೊರಕಿತು. ಆದರೆ, ಬೆಳಗ್ಗೆ ಎದ್ದಾಗ ಚಿತ್ರಣವೇ ಬದ ಲಾ ಗಿತ್ತು. ಇಡೀ ಸಾನ್ನಿ ಧ್ಯ ವನ್ನು ಶ್ರೀ ಗುರು ಕೊಟ್ಟೂರರೇ ಆವರಿಸಿಕೊಂಡಿದ್ದರಂತೆ. ಈ ಬಗ್ಗೆ ಪ್ರಶ್ನಿಸಿದ ವೀರಭದ್ರ ಸ್ವಾಮಿಗೆ, ಕೊಟ್ಟೂ ರರು ಹೇಳಿದ್ದು ಇಷ್ಟು…”ನೀವು ನಿಮ್ಮ ಸ್ಥಳ ವನ್ನು ನನಗೆ ನೀಡಿ. ನೀವು ಕೊಡದ ಗುಡ್ಡಕ್ಕೆ ಹೋಗಿ ಸಾನ್ನಿಧ್ಯ ವಹಿಸಿಕೊಳ್ಳಿ. ನಿಮ್ಮ ಕ್ಷೇತ್ರವು ಕೊಡದಗುಡ್ಡವೆಂದು ಪ್ರಸಿದ್ಧ ವಾಗಲಿ. ನೀವು ನನಗೆ ನೀಡಿದ ಈ ಶಿಖಾಪುರ, ಕೊಟ್ಟೂರು ಎಂದು ಜನ ಪ್ರಿಯತೆ ಪಡೆಯಲಿ’ ಎಂದು ಹರಸಿದ ರಂತೆ. ಪೌರಾಣಿಕ ಹಿನ್ನೆ ಲೆಯ ಈ ಕೊಟ್ಟೂರು ಸ್ವಾಮಿಗೆ, ಇಲ್ಲಿ ದೇಗುಲವಿದ್ದು, ಜಾತ್ರೆಗೆ ಲಕ್ಷಾಂತ ರ ಜನ ಸೇರುತ್ತಾರೆ.
– ಮಾಳವಿಕಾ ಎಂ.ಕೊಟ್ಟೂರು