Advertisement

ಚಿನ್ನ ಗೆದ್ದು ಕಾಮನ್ವೆಲ್ತ್‌ ಗೇಮ್ಸ್‌ ಅರ್ಹತೆ ಸಂಪಾದಿಸಿದ ಚಾನು

10:49 PM Feb 25, 2022 | Team Udayavani |

ಸಿಂಗಾಪುರ: ಮೀರಾಬಾಯಿ ಚಾನು “ಸಿಂಗಾಪುರ ವೇಟ್‌ಲಿಫ್ಟಿಂಗ್‌ ಇಂಟರ್‌ನ್ಯಾಶನಲ್‌’ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಈ ವರ್ಷದ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ಶಿಪ್‌ಗೆ ಆರ್ಹತೆ ಸಂಪಾದಿಸಿದ್ದಾರೆ.

Advertisement

ಗೇಮ್ಸ್‌ ನಲ್ಲಿ ನೂತನವಾಗಿ ಆಯೋಜಿಸಲಾದ 55 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.

ಸಿಂಗಾಪುರ ಕೂಟದಲ್ಲೂ ಚಾನು 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅವರು ಈ ವಿಭಾಗದಲ್ಲಿ ಕಣಕ್ಕಿಳಿದದ್ದು ಇದೇ ಮೊದಲು. ಇಲ್ಲಿ ಒಟ್ಟು 191 ಕೆಜಿ ಭಾರವನ್ನು ಎತ್ತಿ (86 ಕೆಜಿ ಪ್ಲಸ್‌ 105 ಕೆಜಿ) ಚಿನ್ನಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ :ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌ ಪತನ, ದಬಾಂಗ್‌ ಡೆಲ್ಲಿ ಚಾಂಪಿಯನ್‌

Advertisement

Udayavani is now on Telegram. Click here to join our channel and stay updated with the latest news.

Next