Advertisement

ಮೀರಾರೋಡ್‌ ಯುವ ಮಿತ್ರ ಮಂಡಳ: ಗಣೇಶೋತ್ಸವ

04:52 PM Sep 28, 2018 | Team Udayavani |

ಮುಂಬಯಿ: ಮೀರಾ ರೋಡ್‌ ಪೂರ್ವದ ಭಾರತಿ ಪಾರ್ಕ್‌ ಯುನಿಟ್‌ ಸೊಸೈಟಿಯ ಆವರಣದಲ್ಲಿ ತುಳು-ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಮೀರಾರೋಡ್‌ ಯುವ ಮಿತ್ರ ಮಂಡಳದ 22 ನೇ ಸಾರ್ವಜನಿಕ ಗಣೇಶೋತ್ಸವ ಸಂಭ್ರಮವು ಸೆ. 13 ರಂದು ಪ್ರಾರಂಭಗೊಂಡು ಸೆ. 23 ರವರೆಗೆ ಹನ್ನೊಂದು ದಿನ ಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಿತು.

Advertisement

ಪಲಿಮಾರು ಮಠದ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಮತ್ತು ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಗಣಹೋಮ, ಮಹಾಆರತಿ, 108 ತೆಂಗಿನಕಾಯಿಗಳ ಶ್ರೀಗಣಪತಿ ಮಹಾ ಯಜ್ಞ, ಪೂರ್ಣಾಹುತಿ, ರಂಗಪೂಜೆ, ಭಜನೆ ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.

ಪ್ರತಿದಿನ ಸಂಜೆ ಜರಗುವ ಭಜನೆಯಲ್ಲಿ ಕರ್ನಾಟಕ ಮಹಾಮಂ ಡಳ ಭಾಯಂದರ್‌, ಶ್ರೀ ದುರ್ಗಾ ಭಜನ ಮಂಡಳಿ ಸಿಲ್ವರ್‌ಪಾರ್ಕ್‌ ಮೀರಾರೋಡ್‌, ಬಂಟ್ಸ್‌ ಸಂಘ ಮೀರಾಭಾಯಂದರ್‌, ಶ್ರೀ ವಿಠuಲ ಭಜನ ಮಂಡಳಿ ಮೀರಾರೋಡ್‌, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿ, ತುಳುನಾಡ ಸಮಾಜ ಮೀರಾ ಭಾಯಂದರ್‌, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌, ಶ್ರೀ ಹನುಮಾನ್‌ ಭಜನಾ ಮಂಡಳಿ ಭಾಯಂದರ್‌, ರಾಯರ ಬಳಗ ಮೀರಾರೋಡ್‌, ಶ್ರೀ ಲಕ್ಷ್ಮೀ ನಾರಾಯಣ ಭಜನೆ ಸಮಿತಿ ಮೀರಾರೋಡ್‌, ಬಾಲಾಜಿ ಮತ್ತು ಸದ್ಗುರು ಭಜನಾ ಮಂಡಳಿ ಮೀರಾರೋಡ್‌ ಇನ್ನಿತರ ತಂಡಗಳು ಪಾಲ್ಗೊಂಡಿದ್ದವು.

ಸಹ ಸಂಸ್ಥೆಯಾದ ಶ್ರೀ ಲಕ್ಷ್ಮೀನಾರಾ ಯಣ ಭಜನ ಸಮಿತಿಯ ಅಧ್ಯಕ್ಷ ಹರೀಶ್‌ ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಮತ್ತು ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಗುರುಸ್ವಾಮಿ ಜಯಶೀಲ ತಿಂಗಳಾಯ ಅವರನ್ನು ಮೀರಾರೋಡ್‌ ಯುವ ಮಿತ್ರ ಮಂಡಳದ ಅಧ್ಯಕ್ಷ ಜಿತು ಸನಿಲ್‌, ಕಾರ್ಯದರ್ಶಿ ಸಂಪತ್‌ ಶೆಟ್ಟಿ, ಕೋಶಾಧಿಕಾರಿ ವಿಜಯ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸನ್ನಿಧಿ ಪ್ರಸಾದವಿತ್ತು ಗೌರವಿಸಿದರು.

ಸೆ. 23ರಂದು ಭವ್ಯ ಶೋಭಾ ಯಾತ್ರೆಯೊಂದಿಗೆ ಶ್ರದ್ಧಾಭಕ್ತಿಯಿಂದ ಭಾಯಂದರ್‌ ಪಶ್ಚಿಮದ ನದಿ ಯಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜಿಸಲಾಯಿತು. ಪರಿಸರದ ಸಂಘ-ಸಂಸ್ಥೆಗಳು, ಕನ್ನಡೇತರರು, ರಾಜಕೀಯ ನೇತಾರರು ಉಪಸ್ಥಿತ ರಿದ್ದರು. ದಿನಂಪ್ರತಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

Advertisement

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next