ಮುಂಬಯಿ: ಮೀರಾ ರೋಡ್ ಪೂರ್ವದ, ನ್ಯೂ ಪ್ಲೇಸಂಟ್ ಪಾರ್ಕ್‌ನ ಮೀರಾಧಾಮ್ ಸೊಸೈಟಿ ಯಲ್ಲಿರುವ ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಇದರ 15ನೇ ವಾರ್ಷಿಕ ಅರಸಿನ ಕುಂಕುಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಅಪರಾಹ್ನ 3.30 ರಿಂದ ಸಂಜೆ 5.30 ರವರೆಗೆ ಸಮಿತಿಯ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ, ಸಂಜೆ 5.30 ರಿಂದ 6 ರವರೆಗೆ ಶ್ರೀ ದೇವರಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಜರಗಿತು. ಮುಖ್ಯ ಅತಿಥಿಗಳಾದ ಮೀರಾ-ಭಾಯಂದರ್‌ನ ಮಾಜಿ ಮೇಯರ್ ಗೀತಾ ಜೈನ್ ಹಾಗೂ ಡಾ| ಗೀತಾಂಜಲಿ ಸಾಲ್ಯಾನ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಇವರು ದೀಪಪ್ರಜ್ವಲಿಸಿ ಅರಸಿನ ಕುಂಕುಮದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಿತಿಯ ಮಹಿಳೆಯರ ವತಿಯಿಂದ ಗೀತಾ ಜೈನ್ ಹಾಗೂ ಡಾ| ಗೀತಾಂಜಲಿ ಸಾಲ್ಯಾನ್ ಇವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಸಂಜೆ 7 ರಿಂದ ಗುರು ಸದಾನಂದ ಶೆಟ್ಟಿ ಇವರ ನಿರ್ದೇಶನದಲ್ಲಿ ಶ್ರೀ ಶನೀಶ್ವರ ಕೃಪಾಪೋಷಿತ ಮಕ್ಕಳ ಮೇಳ ಮೀರಾರೋಡ್ ಇಲ್ಲಿನ ಬಾಲ ಪ್ರತಿಭೆಗಳಿಂದ ದ್ರೌಪದಿ ಪ್ರತಾಪ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬಾಲ ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕೊನೆಯಲ್ಲಿ ಮಹಾಪ್ರಸಾದ ರೂಪದಲ್ಲಿ ರಾತ್ರಿ 8.30 ರಿಂದ ಅನ್ನಸಂತರ್ಪಣೆಯು ಜರಗಿತು. ಪ್ರತಿಕ್ಷಾ ಶೆಟ್ಟಿ ಮತ್ತು ಲೀಲಾ ಡಿ. ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮಹಿಳಾ ವಿಭಾಗದ ಕಾರ್ಯ ದರ್ಶಿ ಶ್ರೀಮತಿ ಲೀಲಾ ಡಿ. ಪೂಜಾರಿ ಇವರು ಮಹಿಳೆಯರ ಈ ಧಾರ್ಮಿಕ ಅರಸಿನ-ಕುಂಕುಮ ಕಾರ್ಯಕ್ರಮನ್ನು ಯಶಸ್ವಿಯಾಗಿ ನೆರವೇರಿಸಲು ಸಹ ಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾ ಧಿಕಾರಿಗಳು, ಸದಸ್ಯೆಯರು, ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.