Advertisement

ಮೀರಾರೋಡ್‌ ಪಲಿಮಾರು ಮಠ:ಶ್ರೀ ಗಣೇಶ ಚತುರ್ಥಿ ಆಚರಣೆ

12:12 PM Aug 29, 2017 | |

ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ತ ಆ. 25ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Advertisement

ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌, ಟ್ರಸ್ಟಿ ಸಚ್ಚಿದಾನಂದ ರಾವ್‌, ಗೋಪಾಲ ಭಟ್‌ ಅವರ ಪೌರೋಹಿತ್ಯದಲ್ಲಿ  ಸೂರ್ಯೋದಯದಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ತದನಂತರ 108 ತೆಂಗಿನಕಾಯಿಯ ಮಹಾ ಗಣ ಯಾಗ, ಸಂಜೆ ದೀಪಾರಾಧನೆ, ಭಜನೆ, ಶ್ರೀ ಗಣೇಶನಿಗೆ ರಂಗಪೂಜೆ ಹಾಗೂ ಶ್ರೀ ಬಾಲಾಜಿ ಸನ್ನಿಧಿಯ ಪರಿವಾರ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಟ್ರಸ್ಟಿ ಸಚ್ಚಿದಾನಂದ ರಾವ್‌ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ, ಪ್ರತಿ ದಿನ ಬೆಳಗ್ಗೆ ತೆಂಗಿನಕಾಯಿಯ ಮಹಾಯಾಗ, ಸಂಜೆ ಭಜನೆ, ದೀಪಾರಾಧನೆ ಹಾಗೂ ರಂಗಪೂಜೆಯನ್ನು 5 ದಿನಗಳ ವರೆಗೆ ಆಯೋಜಿಸಲಾಗಿದೆ. ಆ. 29ರಂದು ಭವ್ಯ ಶೋಭಾ ಯಾತ್ರೆಯಲ್ಲಿ ಶ್ರೀ ಗಣಪತಿ ದೇವರ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದರು.

ಗಣಪತಿ ಭಟ್‌, ಜಯಾಲಕ್ಷ್ಮೀ ರಾಧಾಕೃಷ್ಣ ಭಟ್‌, ಕರಮಚಂದ್ರ ಗೌಡ, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next