Advertisement

ಮೀರಾರೋಡ್‌ ಪಲಿಮಾರು ಮಠದ ಆವರಣದಲ್ಲಿ ವಾರ್ಷಿಕ ವಸಂತ ಶಿಬಿರ

04:44 PM Jun 07, 2017 | Team Udayavani |

ಮುಂಬಯಿ: ಎಳೆಯ ಮಕ್ಕಳ ಮನಸ್ಸು ಖಾಲಿ ಹಾಳೆಯಂತೆ ಅದರಲ್ಲಿ ಉತ್ತಮ ವಿಚಾರಗಳನ್ನು ತುಂಬಿಸಿ ಬರೆಯಬೇಕು. ಧರ್ಮಾಚರಣೆ, ಧಾರ್ಮಿಕ ಪ್ರಜ್ಞೆ ಮಕ್ಕಳ ದಿನಚರಿಗಳ ಬಗ್ಗೆ,  ಶಾಸ್ತ್ರ, ಸಂಸ್ಕೃತದ  ಬಗ್ಗೆ ಅರಿವು ಮೂಡಿಸುವುದೇ ವಸಂತ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ವಿದ್ವಾನ್‌ ರಮಣ ಆಚಾರ್ಯ ಅವರು ನುಡಿದರು.

Advertisement

ಜೂ. 1 ರಂದು ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಆವರಣದಲ್ಲಿ ವಸಂತ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದೇಶಿ ಸಂಸ್ಕೃತಿಯ ನೇರ ಪ್ರಭಾವದಿಂದ ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಿಂದ ವಿಮುಖರಾಗುತ್ತಿದ್ದೇವೆ. ಪ್ರತಿಯೊಬ್ಬರು ಆಚರಣೆಗಳ ಮಹತ್ವ ಮತ್ತು ವಿಶೇಷತೆಗಳನ್ನು ಮೈಗೂಡಿಸಬೇಕು. ಇದರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಜಾತಿ, ವಯಸ್ಸಿನ ಭೇದವಿಲ್ಲದೆ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಪಲಿಮಾರು ಮಠದ ಟ್ರಸ್ಟಿ ಹಾಗೂ ಶಿಬಿರದ ನಿರ್ದೇಶಕ ಸಚ್ಚಿದಾನಂದ ರಾವ್‌ ಅವರು ವಿಶೇಷ ಪೂಜೆ ಸಲ್ಲಿಸಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹತ್ತು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರತಿದಿನ ವಿಷ್ಣು ಸಹಸ್ರ ನಾಮ, ಸಂಗೀತ, ಪುರಾಣ ಕತೆಗಳ ಸನಾತನ ಧರ್ಮಗಳ ಚಿಂತನೆ, ಸಂಸ್ಕೃತ ಸಂಭಾಷಣೆ, ಹನುಮಂತನ ಪೂಜಾ ವಿಧಾನ, ಯೋಗ, ಸಂಧ್ಯಾವಂದನೆ, ಆಗಾಗ್ಗೆ ಸ್ವರಚಿತ ಕವನ, ಕತೆಗಳ ಪ್ರತಿಭಾ ವಿಕಾಸ‌ಕ್ಕೆ ಅವಕಾಶ ಮಾಡಿಕೊಡಲಾಗುವುದು. ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ಸ್ಕೂಲ್‌ಬಾÂಗ್‌, ದಿನನಿತ್ಯ ಯಾವುದಾದರೊಂದು ಉಡುಗೊರೆ, ಶಾಲಾ ಪರಿಕರ ಹಾಗೂ ಲಘು ಉಪಾಹಾರದ ವ್ಯವಸ್ಥೆಯನ್ನು ಮಠದ ವತಿಯಿಂದ ಉಚಿತವಾಗಿ ಆಯೋಜಿಸಲಾಗಿದೆ. ಮಕ್ಕಳೊಟ್ಟಿಗೆ ಪೋಷಕರು ಹಾಗೂ ಬಂಧು-ಬಳಗದವರು ತಮ್ಮ ಸಂಪೂರ್ಣ ಪ್ರೋತ್ಸಾಹದೊಂದಿಗೆ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಮಧುಮತಿ ಸಚ್ಚಿದಾನಂದ ರಾವ್‌, ಮಯೂರ್‌ ಗುಜನ್‌ ಅವರು ಮಕ್ಕಳ ಯೋಗಕ್ಷೇಮದಲ್ಲಿ ಸಹಕರಿಸಿದರು. ಕೇಂದ್ರ ಅಬಕಾರಿ ಇಲಾಖೆಯ ವಿವೇಕ್‌ ಗುಜನ್‌ ಅವರು ಮಕ್ಕಳ ಯೋಗಕ್ಷೇಮದಲ್ಲಿ ಸಹಕರಿಸಿದರು. ಕೇಂದ್ರ ಅಬಕಾರಿ ಇಲಾಖೆಯ ವಿವೇಕ್‌ ಗುಜನ್‌, ಕರಮಚಂದ ಗೌಡ, ಪ್ರಬಂಧಕ ರಾಧಾಕೃಷ್ಣ ಭಟ್‌, ಜಯರಾಮ ಹೆಬ್ಟಾರ್‌ ಅವರು ಉಪಸ್ಥಿತರಿದ್ದರು. ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು.       

ಚಿತ್ರ-ವರದಿ : ರಮೇಶ್‌ ಅಮೀನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next