Advertisement

ಮೀರಾ-ಡಹಾಣೂ ಬಂಟ್ಸ್‌ ಮೀರಾ-ಭಾಯಂದರ್‌ ವಲಯ: ತಾಳಮದ್ದಳೆ

02:08 PM Aug 08, 2018 | |

ಮುಂಬಯಿ: ಮೀರಾ- ಡಹಾಣೂ ಬಂಟ್ಸ್‌ ಮೀರಾ- ಭಾಯಂದರ್‌ ವಲಯದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಲಾ ಪ್ರತಿಷ್ಠಾನ ಮುಂಬಯಿ ಇದರ ಸಂಚಾಲಕತ್ವದಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇದರ ಕಲಾವಿದೆಯರಿಂದ ಸಮರ ಸೌಗಂಧಿಕ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಆ. 6 ರಂದು ಅಪರಾಹ್ನ ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಪ್ರಾಂಗಣದಲ್ಲಿ ನೆರವೇರಿತು.

Advertisement

ಮಧ್ಯಾಂತರದಲ್ಲಿ ಜರಗಿದ ಅಭಿನಂದನ ಸಮಾರಂಭದಲ್ಲಿ ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಇವರು ಕಲಾವಿದೆಯರನ್ನು ಗೌರವಿಸಿ ಮಾತನಾಡಿ, ಮಹಾಭಾರತದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಪರಿಹಾರಗಳು ದ್ರೌಪದಿಯಿಂದ ಮಾತ್ರ ಸಾಧ್ಯವಾಗುತ್ತಿತ್ತು. ಸನ್ನಿವೇಶಗಳ ಒಳ ಹೊರಗನ್ನು ಅರಿತ ಆಕೆ ಮೇಧಾವಿಯಾಗಿದ್ದಳು. ಅಂತಹ ಮಹಾನ್‌ ಶಕ್ತಿಯ ಆದರ್ಶದೊಂದಿಗೆ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರು ಧರ್ಮ ಪರಿಪಾಲನ ಕಾರ್ಯಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ನುಡಿದು ಅವರನ್ನು ಅಭಿನಂದಿಸಿದರು.

ಮೀರಾ-ಡಹಾಣೂ ಬಂಟ್ಸ್‌ ಮೀರಾ-ಭಾಯಂದರ್‌ ವಲಯದ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಕಾಪು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗುಣಕಾಂತ ಶೆಟ್ಟಿ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. 

ಯುವ ವಿಭಾಗದ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ಪಂಜಿನಡ್ಕ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷರುಗಳಾದ ಗಣೇಶ್‌ ಆಳ್ವ ಮತ್ತು ಮಂಜಯ್ಯ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ರಾಜೇಂದ್ರ ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ಉಪಾಧ್ಯಕ್ಷ ಪಂಜದಗುತ್ತು ಸಂಪತ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ, ಕಲಾಪೋಷಕರಾದ ಉದ್ಯಮಿ ಕಾಶೀಮೀರಾ ಭಾಸ್ಕರ ಶೆಟ್ಟಿ, ರಾಜಕೀಯ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಶಿವರಾಮ ಶೆಟ್ಟಿ, ಆನಂದ ಶೆಟ್ಟಿ ಕುಕ್ಕುಂದೂರು, ವಸಂತಿ ಶೆಟ್ಟಿ, ಸಂಚಾಲಕರಾದ ಪ್ರಕಾಶ್‌ ಎಂ. ಶೆಟ್ಟಿ, ಸುರತ್ಕಲ್‌, ಕರುಣಾಕರ ಶೆಟ್ಟಿ ಕುಕ್ಕುಂದೂರು ಅವರು ಉಪಸ್ಥಿತರಿದ್ದರು.

Advertisement

ಸಮರ ಸೌಗಂಧಿಕ ತಾಳಮದ್ದಳೆಯಲ್ಲಿ ಭಾಗವತರಾಗಿ ಕು| ಅಮೃತಾ ಅಡಿಗ, ಚೆಂಡೆಯಲ್ಲಿ ಅಪೂರ್ವಾ ಸುರತ್ಕಲ್‌, ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ ಅವರು ಭಾಗವಹಿಸಿದ್ದರು. ಕಲಾವಿದೆಯರುಗಳಾಗಿ ಪದ್ಮಾ ಕೆ. ಆರ್‌. ಆಚಾರ್ಯ, ಸುಮಂಗಳಾ ರತ್ನಾಕರ್‌, ವೀಣಾ ತಂತ್ರಿ, ಆಶಾಲತಾ ಕಲ್ಕುರಾಯ, ಅಶ್ವಿ‌ನಿ ನಿಡ್ವÌಣ್ಣಾಯ ಅವರು ಸಹಕರಿಸಿದರು. ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಾಳ್‌ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ:ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next