ಮುಂಬಯಿ: ಕಳೆದ ಎರಡು ವರ್ಷಗಳ ಕೊರೊನಾ ಮಹಾಮಾರಿಯ ಸಂದರ್ಭ ಹೊಟೇಲ್ ಉದ್ಯಮಕ್ಕೆ ಬಹಳಷ್ಟು ಅಡೆತಡೆಗಳಿದ್ದರೂ ಸಂಘಟನೆ ಕೆಲವೊಂದು ಸರಕಾರಿ ನಿಯಮಗಳಲ್ಲಿ ಹೊಟೇಲಿಗರಿಗೆ ಪರಿಹಾರ ದೊರಕಿಸಿ ಕೊಡು ವಲ್ಲಿ ಯಶಸ್ವಿಯಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಪರವಾನಿಗೆ ನವೀಕರಣ ಮಾಡಿಸಿದೆ. ಮಹಾನಗರ ಪಾಲಿಕೆ ಹೆಚ್ಚಿಸಿದ್ದ ನೀರಿನ ಬಿಲ್ಲಿನಲ್ಲಿ ಕಡಿತಗೊಳಿಸಿದೆ. ಅಸೋಸಿಯೇಶನ್‌ನ ಇತಿ ಹಾಸದಲ್ಲೇ ಮೊದಲು ಎಂಬಂತೆ ಮೀರಾರೋಡ್ ವಕಾರ್ಡ್ ಮತ್ತು ದೀಪಕ್ ಆಸ್ಪತ್ರೆಗಳ ಸಹಕಾರದಿಂದ ಹೊಟೇಲ್ ಕಾರ್ಮಿಕರಿಗಾಗಿ ವೈದ್ಯಕೀಯ ಶಿಬಿರ ಆಯೋಜಿಸಿ ರೋಗಿಗಳಿಗೆ ಉಚಿತವಾಗಿ ಔಷಧ ನೀಡಿ ಸಹಕರಿಸಿದೆ. ಮೀರಾ-ಭಾಯಂದರ್ ಮಹಾನಗರಪಾಲಿಕೆಯ ವೈದ್ಯಕೀಯ ವಿಭಾಗದ ಸಹಯೋಗದಿಂದ ಹೊಟೇಲ್ ಕಾರ್ಮಿಕರು ಮತ್ತವರ ಕುಟುಂಬದ ಸದಸ್ಯರಿಗೆ ಕೊರೊನಾ ವಿರುದ್ಧದ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಅನ್ನು ಉಚಿತವಾಗಿ ನೀಡಿದೆ ಎಂದು ಮೀರಾ-ಭಾಯಂದರ್ ಹೊಟೇಲ್ ಅಸೋಸಿಯೇಶನ್‌ನ ಅಧ್ಯಕ್ಷ ಮಧುಕರ ಶೆಟ್ಟಿ ತಿಳಿಸಿದರು.
ಮೀರಾರೋಡ್ ಪೂರ್ವದ ಬ್ರೆವಲೀರ್ ಪಾರ್ಕ್‌ನ ಕೃಷ್ಣ ಪ್ಯಾಲೇಸ್ ಹೊಟೇಲ್ ಸಭಾಗೃಹದಲ್ಲಿ ಎ. 13ರಂದು ಸಂಘಟನೆಯ 16 ಮತ್ತು 17ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಟನೆಯ ಸದಸ್ಯರಲ್ಲಿ ಪ್ರತೀ ಹೊಟೇಲಿಗೊಬ್ಬರಿಗೆ ಫೋಸ್ಟ್ಯಾಕ್ ತರಬೇತಿ ನೀಡಿ ಪ್ರಮಾಣಪತ್ರ ಕೊಡಿಸಿದೆ. ಆಹಾರ್ ಸಂಘಟ ನೆಯೊಂದಿಗೆ ಹೊಂದಿಕೊಂಡು ಎಫ್‌ಎಲ್ 3 ಪರ ವಾನಿಗೆ ಶುಲ್ಕ ಕಡಿಮೆ ಮಾಡಲು ಶ್ರಮಿಸಿ, ಪ್ರತಿಫಲ ಪಡೆದಿದೆ. ಸದಸ್ಯರು ಹೊಸ ಸದಸ್ಯತ್ವಕ್ಕೆ ಪ್ರಾಮುಖ್ಯತೆ ನೀಡುವುದರೊಂದಿಗೆ ಸಂಘಟನೆಯ ಉದ್ದೇಶವನ್ನು ತಿಳಿಸಬೇಕು. ಅಸೋಸಿಯೇಶನ್‌ನನ್ನು ಬಲಪಡಿಸಲು ಸದಸ್ಯರ ಸಹಕಾರ ಅಗತ್ಯ ಎಂದರು.
ಆರಂಭದಲ್ಲಿ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಗೌರವ ಕಾರ್ಯ ದರ್ಶಿ ಶ್ರೇಯಸ್ ಆರ್. ಶೆಟ್ಟಿ ಸ್ವಾಗತಿಸಿ, ಗತ ವರ್ಷ ಗಳ ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ಚಂದ್ರಹಾಸ್ ಕೆ. ಶೆಟ್ಟಿ ಲೆಕ್ಕಪತ್ರ ಮಂಡಿಸಿ, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು. ಕಾಮತ್ ಆ್ಯಂಡ್ ಕಂಪೆನಿಯವರನ್ನು ಮುಂದಿನ ವರ್ಷದ ಲೆಕ್ಕಪರಿಶೋಧಕರನ್ನಾಗಿ ಪುನರ್ ನೇಮಿಸಲಾಯಿತು. ಇದೇ ಸಂದರ್ಭ ರೇಣುಕಾ ಎಂಟರ್‌ಪ್ರೈಸಸ್, ವೈಟಲ್ ಎಂಟರ್‌ಪ್ರೈಸಸ್, ವಿಜನ್ ಫಯರ್ ಸಿಸ್ಟಮ್ಸ್ ಹಾಗೂ ಮೆನ್ಶನ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಸಂಸ್ಥೆಯ ಉತ್ಪನ್ನಗಳ ಬಗ್ಗೆ ವಿವರಿಸಿದರು.
ಜೀವನ್ ಶೆಟ್ಟಿ ಅವರು ನೂತನ ಬಿಲ್ಲಿಂಗ್ ಸಿಸ್ಟಮ್‌ನ ತಂತ್ರಾಂಶದ ಬಗ್ಗೆ ಪರಿಚಯಿಸಿದರು. ಎಯು ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬಂದಿ ಹೊಟೇಲ್ ಉದ್ಯಮಕ್ಕೆ ಕೆಲವೊಂದು ಖಾತೆಗಳಿಂದ ಆಗುವ ಲಾಭದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಸಂಘಟನೆಯ ಹಿರಿಯ ಸದಸ್ಯರಾದ ಪಿಂಕ್ ಡ್ರಾಗನ್ ಫ್ಯಾಮಿಲಿ ರೆಸ್ಟೋರೆಂಟ್‌ನ ಲಿಯೋ ವಿತುಂಗ್, ಶುಭಂ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ
ಆನಂದ್ ಎನ್. ಶೆಟ್ಟಿ ಕುಕ್ಕುಂದೂರು, ಕೃಷ್ಣ ಪ್ಯಾಲೇಸ್ ಮೀರಾರೋಡ್ ಇದರ ಕೃಷ್ಣ ವೈ. ಶೆಟ್ಟಿ, ಸಾಯಿ ಪ್ಯಾಲೇಸ್ ಗಾರ್ಡನ್ ರೆಸ್ಟೋರೆಂಟ್‌ನ ಗುಣಪಾಲ್ ಶೆಟ್ಟಿ, ಸಂಘಟನೆಗೆ ವಿಶೇಷ ಸಹಕಾರ ನೀಡಿದ ಮಹಾರಾಷ್ಟ್ರ ಫೆಡರೇಶನ್ ಆಫ್ ಹೊಟೇಲ್ಸ… ಆ್ಯಂಡ್ ರೆಸ್ಟೋರೆಂಟ್ ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ. ಶೆಟ್ಟಿ, ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ, ಆಹಾರ್‌ನ ಕಾರ್ಯದರ್ಶಿಗಳಾದ ಸುಧಾಕರ್ ಶೆಟ್ಟಿ, ಸುಕೇಶ್ ಶೆಟ್ಟಿ, ಹಿರಿಯ ಹೊಟೇಲ್ ಉದ್ಯಮಿ ಮನ್ಮಥ ಕಡಂಬ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಸಂಘಟನೆಯ ಮುಖ್ಯ ಸಲಹೆಗಾರ ಹಾಗೂ ಮಹಾರಾಷ್ಟ್ರ ಫೆಡರೇಶನ್ ಆಫ್ ಹೊಟೇಲ್ಸ್ ಆ್ಯಂಡ್ ರೆಸ್ಟೋರೆಂಟ್‌ನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಾಲ್ಯಾನ್ ಅವರು ಕೊರೊನಾ ಸಮಯದಲ್ಲಿ ತೊಂದರೆಗೊಳಗಾದ ಸರ್ವಸದಸ್ಯರಿಗೆ ಮುಂದಿನ ಸಮಯದಲ್ಲಿ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿ ಸಂಘಟನೆಯು ಕೊರೊನಾ ಸಮಯದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಹಾಗೂ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಜತೆ ಕೋಶಾಧಿಕಾರಿ ಅನಿಲ್ ಶೆಟ್ಟಿ ವಂದಿಸಿದರು. ಮಹಾಸಭೆಯನ್ನು ಡಾ| ಕಮಲೇಶ್ ಗಗ್ಲಾನಿ ನಿರೂಪಿಸಿದರು. ಉಪಾಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಸಲಹೆಗಾರ ರಾದ ರತ್ನಾಕರ ಶೆಟ್ಟಿ ತಾಳಿಪಾಡಿಗುತ್ತು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೀವನ್ ಎಸ್. ಶೆಟ್ಟಿ, ಧೀರಜ್ ಶೆಟ್ಟಿ, ಸಂತೋಷ್ ಶೆಟ್ಟಿ, ಹರೀಶ್ ಶೆಟ್ಟಿ ಸಹಕರಿಸಿದರು. ಸದಸ್ಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.