Advertisement

ರಾಗಿಣಿಗೆ ಡ್ರಗ್ಸ್ ಸೇವಿಸಿ ಎಂದು ಹೇಳಿರಲಿಲ್ಲ,ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ: ಸೋಮಶೇಖರ್

03:58 PM Sep 05, 2020 | keerthan |

ಮೈಸೂರು: ನಟಿ ರಾಗಿಣಿಗೆ ಡ್ರಗ್ಸ್ ಸೇವಿಸಿ ಎಂದು ಬಿಜೆಪಿ ಹೇಳಿರಲಿಲ್ಲ. ರಾಗಿಣಿ ಅವರ ಬಂಧನದಿಂದ ಬಿಜೆಪಿ ಪಕ್ಷಕ್ಕೆ ಮುಜುಗರವಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ಆ ಪಕ್ಷ, ಇ ಪಕ್ಷ ಎಂದು ಬರುವುದಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಬರುವುದಿಲ್ಲ. ಯಾವ ಪಕ್ಷದವರು ತಪ್ಪು ಮಾಡಿದರೂ ಅದು ತಪ್ಪೆ. ಈ ಸಂಬಂಧ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವಂತೆ ಕ್ಯಾಬಿನೆಟ್‌ನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಚಿತ್ರ ನಟ, ನಟಿಯರಿಗೆ ಸಮಾಜದಲ್ಲಿ ಜನಪ್ರಿಯತೆ ಇರುತ್ತದೆ. ಅವರೇ ಡ್ರಗ್ಸ್ ಸೇವನೆ ಮಾಡಿದರೆ ಸಮಾಜಕ್ಕೆ ಯಾವ ರೀತಿ ಸಂದೇಶ ರವಾನೆ ಆಗುತ್ತದೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಖುದ್ದು ಮುಖ್ಯಮಂತ್ರಿಗಳೇ ಪ್ರತಿ ದಿನವೂ ಡ್ರಗ್ಸ್ ಪ್ರಕರಣದ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.

ಇದನ್ನೂ ಓದಿ: 2021ರಲ್ಲೂ ಮುಂದುವರಿಯಲಿದೆ ಕೋವಿಡ್, ಎರಡನೇ ಹಂತದಲ್ಲಿ ಅಪ್ಪಳಿಸಲಿದೆ ಸೋಂಕು: ತಜ್ಞರ ವರದಿ

ಡ್ರಗ್ಸ್‌ನಿಂದ ಯುವ ಸಮೂಹ ಹಾಳಾಗುತ್ತದೆ. ಆದ್ದರಿಂದ ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವ ಇರಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸೋಮಶೇಖರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next