Advertisement

ರಾಜ್ಯದ ಜನ ಕಾಂಗ್ರೆಸ್‌ ನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನ ದೂರವಿಲ್ಲ: ಆರ್‌ ಅಶೋಕ್

06:53 PM Jun 14, 2022 | Team Udayavani |

ಬೆಂಗಳೂರು: ಸೋನಿಯಾ ಹಾಗೂ ಕುಟುಂಬದ ಅಕ್ರಮ ಆಸ್ತಿ ರಕ್ಷಿಸಲು ಕಾಂಗ್ರೆಸ್ ಧರಣಿಯ ನಾಟಕವಾಡುತ್ತದೆ. ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಸೇರಿ ಕಟ್ಟಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ನಂತರ ಬಂದ ಸರ್ಕಾರಗಳು ಪತ್ರಿಕೆಯ ಅಭಿವೃದ್ಧಿಗಾಗಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಭೂಮಿ ನೀಡಿದ್ದಾರೆ. ಅದನ್ನು ಕಬಳಿಸಿ ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹೊರಟ ಸೋನಿಯಾ ಹಾಗೂ ರಾಹುಲ್ ಗಾಂಧಿಯವರ ಮೇಲೆ ನಡೆಯುತ್ತಿರುವ ಕೇಸ್ ಇದು. ಕಾಂಗ್ರೆಸ್ ಪಕ್ಷದ ಮೇಲೆ ಯಾರೂ ಕೇಸ್ ಹಾಕಿಲ್ಲ. ಅಕ್ರಮವಾಗಿ ಗಳಿಸಿದ ಗಾಂಧಿ ಕುಟುಂಬದ ಆಸ್ತಿ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ಇವರೆಲ್ಲ ಸೇರಿ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಅವರು ಅಧಿಕಾರದಲ್ಲಿದ್ದಾಗಲೂ CBI, ED ಇತ್ತು. ಅದು ಹೇಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರಿಗೆ ಗೊತ್ತು. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಕೇಸ್ ದಾಖಲಿಸಿದಾಗ ನೋಟಿಸ್ ನೀಡಿ ವಿಚಾರಣೆ ನಡೆಸುವುದು ಕಾನೂನು ಪ್ರಕ್ರಿಯೆ. ಏನೂ ತಪ್ಪು ನಡೆದಿಲ್ಲ ಎನ್ನುವ ಕಾಂಗ್ರೆಸ್ ಗೆ ಭಯ ಯಾಕೆ?  ಭೀತಿ ಯಾಕೆ? ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಕೇಂದ್ರದ ಮೇಲೆ ಆರೋಪ ಯಾಕೆ? ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ: ಶಾಲೆಯ ಬಿಸಿಯೂಟ ತಯಾರು ವೇಳೆ ಸಾಂಬಾರ್‌ ಪಾತ್ರೆಗೆ ಬಿದ್ದ ಮಹಿಳೆ: ಚಿಕಿತ್ಸೆ ಫಲಿಸದೆ ಸಾವು

ಕಾಂಗ್ರೆಸ್ ನವರು ಎಮರ್ಜೆನ್ಸಿಗಿಂತ ಇದು ಕೆಟ್ಟದ್ದು ಎಂದಿದ್ದಾರೆ. ಈಗಲಾದರೂ ಎಮರ್ಜೆನ್ಸಿ ಹೇರಿದ್ದು  ತಪ್ಪು ಎನ್ನುವುದು ಅರ್ಥ ಆದರೆ ಸಾಕು. ಅಧಿಕಾರಕ್ಕಾಗಿ ಮಾಧ್ಯಮಗಳಿಗೆ, ಸಾರ್ವಜನಿಕ ಅಭಿಪ್ರಾಯಕ್ಕೆ ಕಡಿವಾಣ ಹಾಕಿ, ದೇಶವನ್ನೇ ಕತ್ತಲೆಯಲ್ಲಿಟ್ಟ ಸ್ವಾರ್ಥಿಗಳಿಗೆ, ವಿಚಾರಣೆಗೆ ಕರೆದದ್ದು ತಪ್ಪು ಎನ್ನುವ ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಇದು ಭಾರತ, ಇಟಲಿ ಅಲ್ಲ. ಇಲ್ಲಿಯ ಕಾನೂನಿಗೆ ಬೆಲೆ ಕೊಡಲೇಬೇಕು. ಹತಾಶೆಯಿಂದ, ರಾಜಕೀಯ ಮಾಡಲು ಪ್ರತಿಭಟನೆ ಮಾಡಿದರೆ ರಾಜ್ಯದ ಜನ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನ ದೂರವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next