Advertisement
ಸ್ವಯಂ ಉದ್ಯೋಗ ಯೋಜನೆಜಿಲ್ಲೆಯಲ್ಲಿ “ಸ್ವಯಂ ಉದ್ಯೋಗ’ ಯೋಜನೆಯಡಿ ನಿಗಮಕ್ಕೆ ನೀಡುವ ಗುರಿಗಿಂತ ಮೂರುಪಟ್ಟು ಅಧಿಕ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. 2018-19ರಲ್ಲಿ 59 ಭೌತಿಕ ಗುರಿ, 52.90 ಲ.ರೂ. ಆರ್ಥಿಕ ಗುರಿ ನೀಡಲಾಗಿತ್ತು. 2.37 ಕೊ.ರೂ. ಮೊತ್ತದ 172 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಯೋಜನೆಯಡಿಯಲ್ಲಿ ಬ್ಯಾಂಕ್, ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5 ಲ.ರೂ. ಮಿತಿ ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. 5 ಲ.ರೂ.ಗೆ ಶೇ. 33ರಷ್ಟು ಹಾಗೂ 1 ಲ.ರೂ. ಮಿತಿಯೊಳಗಿರುವ ಯೋಜನೆಗೆ ಶೇ. 50ರಷ್ಟು ಸಹಾಯಧನ ನಿಗಮ ನೀಡಲಿದೆ.
ನಿಗಮದಿಂದ ಶ್ರಮಶಕ್ತಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಜಿಲ್ಲೆಗೆ ಕೇವಲ 77 ಭೌತಿಕ ಹಾಗೂ 38.35 ಲ.ರೂ. ಆರ್ಥಿಕ ಗುರಿ ನೀಡಲಾಗಿದೆ. ಆದರೆ 29.54 ಕೊ.ರೂ. ಮೊತ್ತದ 5,908 ಅರ್ಜಿಗಳು ಸ್ವೀಕೃತಗೊಂಡಿವೆ. 2016-17ರಲ್ಲಿ 262 ಭೌತಿಕ ಹಾಗೂ ಆರ್ಥಿಕ 1.31ಕೋ. ಗುರಿ ನಿಗದಿ ಪಡಿಸಿದ್ದು, ಆದರೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 673. ಈ ಯೋಜನೆಯಡಿ 50,000 ರೂ. ಮೊತ್ತವನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡಿದರೆ ಅರ್ಜಿದಾರರಿಗೆ ಶೇ.50ರಷ್ಟು ಬ್ಯಾಕ್ ಎಂಡ್ ಸಹಾಯಧನ ಸಿಗಲಿದೆ. ಗಂಗಾ ಕಲ್ಯಾಣ ಯೋಜನೆ
ಈ ಯೋಜನೆಯಡಿ 2018-19ನೇ ಸಾಲಿನಲ್ಲಿ ನಿಗಮಕ್ಕೆ ಭೌತಿಕ 41, ಆರ್ಥಿಕ 82 ಲ.ರೂ., ಗುರಿ ನೀಡಿದ್ದು, 43 ಅರ್ಜಿ ಸ್ವೀಕೃತವಾಗಿದೆ. 2016-17ರಲ್ಲಿ 58 ಭೌತಿಕ ಹಾಗೂ ಆರ್ಥಿಕ 87 ಕೋ. ರೂ. ಗುರಿ ನಿಗದಿಪಡಿಸಿದ್ದು, 58 ಅರ್ಜಿಗಳು ಸಲ್ಲಿಕೆಯಾಗಿವೆೆ. ಈ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ರೈತರಿಗೆ ಕೊಳವೆ ಬಾವಿ, ಪಂಪ್, ವಿದ್ಯುದೀಕರಣಕ್ಕೆ, ಬಾವಿ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ.
Related Articles
ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಹಾಗೂ ಶ್ರಮಶಕ್ತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ಹಾಗೂ ಗರಿಷ್ಠ ಮಿತಿಯಲ್ಲಿ ಸಹಾಯಧನ ನೀಡಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವ ಜನರು ಸ್ವ ಉದ್ಯೋಗ ಪ್ರಾರಂಭಿಸಲು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
Advertisement
ಫಲಾನುಭವಿಗಳ ಆಯ್ಕೆ ಯೋಜನೆಗಳಿಗೆ ಉತ್ತಮ ಸ್ಪಂದನೆ ಇದೆ. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
-ಮುಹಮ್ಮದ್ ಶಾಫಾÌನ್, ಅಲ್ಪಸಂಖ್ಯಾಕ ನಿಗಮದ ವ್ಯವಸ್ಥಾಪಕ, ಉಡುಪಿ ಜಿಲ್ಲೆ