Advertisement

ಅಪ್ರಾಪ್ತ ವಯಸ್ಸಿನ ಹುಡುಗರಿಂದ 8ರ ಬಾಲೆಯ ಮೇಲೆ ಅತ್ಯಾಚಾರ

12:40 PM May 03, 2018 | Team Udayavani |

ಬಾರಾಬಂಕಿ, ಉತ್ತರ ಪ್ರದೇಶ : ಎಂಟು ವರ್ಷ ಪ್ರಾಯದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗರು ರೇಪ್‌ ಮಾಡಿರುವ ಅತ್ಯಮಾನುಷ ಘಟನೆ ಇಲ್ಲಿನ ತಿಕಾಯತ್‌ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೊನ್ನೆ ಮಂಗಳವಾರ ಈ ಘಟನೆ ನಡೆದಿದೆ. ಬಾಲಕಿಯು ತನ್ನ ಮನೆಯಲ್ಲಿ ಒಬ್ಬಳೇ ಇದ್ದಳು. ಆಗ ಅಲ್ಲಿಗೆ ಬಂದು 9 ವರ್ಷ ಮತ್ತು 13 ವರ್ಷದ ಇಬ್ಬರು ಹುಡುಗರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಮನೆಗೆ ಬಂದ ಬಾಲಕಿಯ ತಾಯಿಗೆ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದರು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಕಾಯತ್‌ನಗರ ಠಾಣೆಯ ಎಸ್‌ಎಚ್‌ಓ ಕೆ ಕೆ ಮಿಶ್ರಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next