Advertisement

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

03:19 PM Mar 16, 2024 | Team Udayavani |

ಕೆಜಿಎಫ್‌: ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸುತ್ತಿ ರುವ ಪ್ರಕರಣ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಕಳೆದ 2023ರ ಏಪ್ರಿಲ್‌ ತಿಂಗಳಿನಿಂದ ನವೆಂಬರ್‌ವರೆಗಿನ 8 ತಿಂಗಳ ಅವಧಿ ಯಲ್ಲಿ 98 ಬಾಲ ಗರ್ಭಿಣಿ ಪ್ರಕರಣ ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿ ತಿಳಿದು ಬಂದಿದೆ.

Advertisement

ಕೇವಲ 8 ತಿಂಗಳ ಅವಧಿಯಲ್ಲಿ 98 ಪ್ರಕರಣ ನಡೆ ದಿದ್ದು, 64 ಎಫ್‌ಐಆರ್‌ ದಾಖಲಿಸಲಾಗಿದೆ. 19 ಪ್ರಕರಣಗಳಲ್ಲಿ 18 ವರ್ಷ ಪೂರ್ಣಗೊಂಡಿದ್ದು ಕಂಪ್ಯೂಟರ್‌ಗೆ ದಾಖಲಿಸುವಾಗ ಬಾಲ್ಯವಿವಾಹ ಎಂದು ತಪ್ಪಾಗಿ ನಮೂದಾಗಿದೆ. ಇನ್ನು ಕೆಜಿಎಫ್‌ ಸೇರಿದಂತೆ ಜಿಲ್ಲಾದ್ಯಂತ ಒಟ್ಟು 15 ಪ್ರಕರಣ ಅಂತರ್‌ ರಾಜ್ಯದ್ದಾಗಿವೆ ಎನ್ನಲಾಗಿದೆ.

ಆರೋಗ್ಯ ಸಮಸ್ಯೆ: 14ರಿಂದ 17ವರ್ಷದವರೆಗಿನ ಚಿಕ್ಕ ವಯಸ್ಸಿನ ಮಕ್ಕಳು ಗರ್ಭವತಿಯಾಗುತ್ತಿರುವುದು ಕಳವಳಕಾರಿ ಆಗಿದ್ದು, 18 ವರ್ಷ ತುಂಬುವ ಮುನ್ನ ವೇ ಹೆಣ್ಣುಮಕ್ಕಳು ಗರ್ಭಿಣಿಯರಾದಲ್ಲಿ ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾ ಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇರುತ್ತದೆ. ಬಾಲ ಗರ್ಭಿಣಿಯರಿಗೆ ಜನಿಸುವ ಶಿಶುಗಳು ಅತಿ ಕಡಿಮೆ ತೂಕ ಹೊಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊತೆಗೆ ಈ ಮಕ್ಕಳು ಹುಟ್ಟುವಾಗಲೇ ಹಲವು ಆರೋಗ್ಯ ಸಮಸ್ಯೆಗಳೊಂದಿಗೆ ಜನಿಸಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪೌಷ್ಟಿಕತೆ: ಬಾಲ ಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಕೂಡಾ ಸಿಗುತ್ತಿಲ್ಲ. ಅವರಿಗೆ ಸೂಕ್ತ ರೀತಿಯಲ್ಲಿ ಆರೈಕೆಯನ್ನೂ ಮಾಡಲಾಗುತ್ತಿಲ್ಲ. ಮಗು ಜನಿಸಿದ ಬಳಿಕ ತಾಯಿ, ಮಗು ಎರಡಕ್ಕೂ ಸೂಕ್ತ ಪೋಷಣೆ ಸಿಗುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಬಾಲಕಿಯರು 18 ವರ್ಷ ತುಂಬುವ ಮುನ್ನವೇ ಗರ್ಭವತಿ ಆಗುತ್ತಿರು ವುದರಿಂದ ಹೆಚ್ಚಾಗಿ ಗರ್ಭಪಾತ ಗಳಾಗುತ್ತಿವೆ ಎನ್ನಲಾಗಿದೆ.

ಅರ್ಧಕ್ಕೆ ಶಿಕ್ಷಣ ಮೊಟಕು: ಬಾಲ್ಯದಲ್ಲೇ ಗರ್ಭ ಧರಿಸುವ ಬಾಲಕಿಯರು ಸಹಜವಾಗಿಯೇ ತಮ್ಮ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯ ಆಗುವುದಿಲ್ಲ. ಅರ್ಧಕ್ಕೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಸಂಸಾರ ಜೀವನಕ್ಕೆ ಬಂದ ಬಳಿಕ ಒಳ್ಳೆಯ ಉದ್ಯೋಗಕ್ಕೆ ಉತ್ತಮ ರೀತಿಯ ಜೀವನಶೈಲಿಯನ್ನು ರೂಢಿಸಿಕೊಳ್ಳು ವುದಕ್ಕೆ ಸಾಧ್ಯ ಆಗುವುದಿಲ್ಲ. ಇದರಿಂದ ಜೀವನ ಪಯಂìತ ಆರ್ಥಿಕವಾಗಿ ಹಿಂದುಳಿದು, ಬಡತನ ದಲ್ಲೇ ಜೀವನವನ್ನು ಸವೆಸುವ ಅನಿವಾರ್ಯತೆ ಎದುರಿಸಬೇಕಾಗುತ್ತದೆ.

Advertisement

ಅರಿವಿನ ಕೊರತೆ: ಬಾಲ ಗರ್ಭಿಣಿಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ಬಡತನ, ಮನೆ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಡಿಮೆ ಮಾಡಿಕೊಳ್ಳಬೇಕೆಂಬ ಮನೋಭಾವ. ಮಕ್ಕಳನ್ನು ಹೆರಬೇಕೆಂಬ ಧೋರಣೆ, ಲೈಂಗಿಕ ಕ್ರಿಯೆ, ಗರ್ಭಧಾರಣೆ ಅಂದರೆ ಏನು? ಯಾವಾಗ ಗರ್ಭಿಣಿಯಾಗಬೇಕು? ಯಾವಾಗ ಹೆರಬೇಕು? ಅದಕ್ಕೆ ದೇಹ ತಯಾರಾಗಿದೆಯೇ ಎಂಬ ಅರಿವು ಇಲ್ಲದೆ ಇರುವುದು. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಇತ್ಯಾದಿ ಕಾರಣ ಎಂದು ಹೇಳಲಾಗುತ್ತಿದೆ.

ಕಡಿವಾಣ ಹಾಕಲು ಸಾಧ್ಯ ಆಗುತ್ತಿಲ್ಲ:  ರಾಜ್ಯದಲ್ಲಿ ಗ್ರಾಮದಿಂದ ರಾಜ್ಯಮಟ್ಟದವರೆಗೆ ಸುಮಾರು 59 ಸಾವಿರ ಬಾಲ್ಯವಿವಾಹ ನಿಷೇಧ ಅಧಿ ಕಾರಿಗಳು ಇದ್ದಾಗ್ಯೂ ಸರ್ಕಾರ, ಪೊಲೀಸ್‌, ಬಾಲ್ಯವಿವಾಹ ತಡೆಯುವ ಅಧಿ ಕಾರಿಗಳು, ಬಾಲ್ಯವಿವಾಹ ತಡೆ ಕಾವಲು ಸಮಿತಿ, ಬಾಲ ರಕ್ಷಣಾ ಸಮಿತಿ ಸೇರಿದಂತೆ ಇತರ ಸಂಘ-ಸಂಸ್ಥೆಗಳು ಸೇರಿದಂತೆ ಯಾರಿಂದಲೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಜನವರಿಯಲ್ಲಿ 10 ಪ್ರಕರಣ ದಾಖಲು:

2024ರ ಜನವರಿ ಒಂದು ತಿಂಗಳಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲೂಕಿನಲ್ಲಿ 10 ಬಾಲ ಗರ್ಭಿಣಯರ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರು ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದೆ. ಮತ್ತೂಬ್ಬರು ದೆಹಲಿಯಲ್ಲಿ ವಾಸವಾಗಿರುತ್ತಾರೆ ಎನ್ನಲಾಗಿದೆ. ಉಳಿದಂತೆ ಒಟ್ಟು 7 ಮಂದಿ ಬಾಲ ಗರ್ಭಿಣಿ ಪ್ರಕರಣ ದಾಖಲಾಗಿದ್ದು, ಎಲ್ಲರ ವಿರುದ್ಧ ಹತ್ತಿರದ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸುತ್ತಿಲ್ಲ :

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದರೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಬಾಲ್ಯ ವಿವಾಹಗಳಾಗು ತ್ತಿವೆ. ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಪೋಕ್ಸೋ ಅಡಿ ಪ್ರಕರಣ ದಾಖಲಿಸುತ್ತಿಲ್ಲ. ಅಪ್ರಾಪೆ¤ ಗರ್ಭಿಣಿಯಾದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್‌ ಠಾಣೆಗೆ ದೂರು ನೀಡಬೇಕು. ತಾಯಿ ಕಾರ್ಡ್‌ ಕೊಡುವಾಗಲಾ ದರೂ ಎಚ್ಚೆತ್ತುಕೊಳ್ಳಬೇಕು. ಆದರೆ, ಇದ್ಯಾವುದೂ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅಮಾಯಕ ಮುಗª ಕಂದಮ್ಮಗಳು ಬಾಲ ಗರ್ಭಿಣಿಯರಾಗುತ್ತಿದ್ದರೂ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿ ಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿಯಾಗಿದೆ.

ತಾಲೂಕಾದ್ಯಂತ ಬಾಲ್ಯ ವಿವಾಹ ಗಳಾಗದಂತೆ ಎಚ್ಚರ ವಹಿಸಲಾಗಿದ್ದು, ಕ್ಷೇತ್ರ ಶಿಕ್ಷಣಾ ಧಿಕಾರಿ, ತಾಲೂಕು ಕಾನೂನು ಸೇವಾ ಪ್ರಾ ಧಿಕಾರದ ಸಹಯೋಗದೊಂದಿಗೆ ಎಲ್ಲಾ ಸರ್ಕಾರಿ ಮತ್ತು ವಸತಿ ಶಾಲೆಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸ ಲಾಗಿದೆ. ಒಂದು ವೇಳೆ ಎಲ್ಲಾದರೂ ಬಾಲ್ಯ ವಿವಾಹ ಕಂಡುಬಂದಲ್ಲಿ ಜನರು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ.-ರಾಜೇಶ್‌, ಸಿಡಿಪಿಒ ಕೆಜಿಎಫ್‌ ತಾಲೂಕು

ನಾಗೇಂದ್ರ ಕೆ.

Advertisement

Udayavani is now on Telegram. Click here to join our channel and stay updated with the latest news.

Next