Advertisement
ಕೇವಲ 8 ತಿಂಗಳ ಅವಧಿಯಲ್ಲಿ 98 ಪ್ರಕರಣ ನಡೆ ದಿದ್ದು, 64 ಎಫ್‌ಐಆರ್ ದಾಖಲಿಸಲಾಗಿದೆ. 19 ಪ್ರಕರಣಗಳಲ್ಲಿ 18 ವರ್ಷ ಪೂರ್ಣಗೊಂಡಿದ್ದು ಕಂಪ್ಯೂಟರ್‌ಗೆ ದಾಖಲಿಸುವಾಗ ಬಾಲ್ಯವಿವಾಹ ಎಂದು ತಪ್ಪಾಗಿ ನಮೂದಾಗಿದೆ. ಇನ್ನು ಕೆಜಿಎಫ್ ಸೇರಿದಂತೆ ಜಿಲ್ಲಾದ್ಯಂತ ಒಟ್ಟು 15 ಪ್ರಕರಣ ಅಂತರ್ ರಾಜ್ಯದ್ದಾಗಿವೆ ಎನ್ನಲಾಗಿದೆ.
Related Articles
Advertisement
ಅರಿವಿನ ಕೊರತೆ: ಬಾಲ ಗರ್ಭಿಣಿಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ಬಡತನ, ಮನೆ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಡಿಮೆ ಮಾಡಿಕೊಳ್ಳಬೇಕೆಂಬ ಮನೋಭಾವ. ಮಕ್ಕಳನ್ನು ಹೆರಬೇಕೆಂಬ ಧೋರಣೆ, ಲೈಂಗಿಕ ಕ್ರಿಯೆ, ಗರ್ಭಧಾರಣೆ ಅಂದರೆ ಏನು? ಯಾವಾಗ ಗರ್ಭಿಣಿಯಾಗಬೇಕು? ಯಾವಾಗ ಹೆರಬೇಕು? ಅದಕ್ಕೆ ದೇಹ ತಯಾರಾಗಿದೆಯೇ ಎಂಬ ಅರಿವು ಇಲ್ಲದೆ ಇರುವುದು. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಇತ್ಯಾದಿ ಕಾರಣ ಎಂದು ಹೇಳಲಾಗುತ್ತಿದೆ.
ಕಡಿವಾಣ ಹಾಕಲು ಸಾಧ್ಯ ಆಗುತ್ತಿಲ್ಲ: ರಾಜ್ಯದಲ್ಲಿ ಗ್ರಾಮದಿಂದ ರಾಜ್ಯಮಟ್ಟದವರೆಗೆ ಸುಮಾರು 59 ಸಾವಿರ ಬಾಲ್ಯವಿವಾಹ ನಿಷೇಧ ಅಧಿ ಕಾರಿಗಳು ಇದ್ದಾಗ್ಯೂ ಸರ್ಕಾರ, ಪೊಲೀಸ್, ಬಾಲ್ಯವಿವಾಹ ತಡೆಯುವ ಅಧಿ ಕಾರಿಗಳು, ಬಾಲ್ಯವಿವಾಹ ತಡೆ ಕಾವಲು ಸಮಿತಿ, ಬಾಲ ರಕ್ಷಣಾ ಸಮಿತಿ ಸೇರಿದಂತೆ ಇತರ ಸಂಘ-ಸಂಸ್ಥೆಗಳು ಸೇರಿದಂತೆ ಯಾರಿಂದಲೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಜನವರಿಯಲ್ಲಿ 10 ಪ್ರಕರಣ ದಾಖಲು:
2024ರ ಜನವರಿ ಒಂದು ತಿಂಗಳಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ 10 ಬಾಲ ಗರ್ಭಿಣಯರ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರು ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದೆ. ಮತ್ತೂಬ್ಬರು ದೆಹಲಿಯಲ್ಲಿ ವಾಸವಾಗಿರುತ್ತಾರೆ ಎನ್ನಲಾಗಿದೆ. ಉಳಿದಂತೆ ಒಟ್ಟು 7 ಮಂದಿ ಬಾಲ ಗರ್ಭಿಣಿ ಪ್ರಕರಣ ದಾಖಲಾಗಿದ್ದು, ಎಲ್ಲರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಿಸುತ್ತಿಲ್ಲ :
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದರೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಬಾಲ್ಯ ವಿವಾಹಗಳಾಗು ತ್ತಿವೆ. ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಪೋಕ್ಸೋ ಅಡಿ ಪ್ರಕರಣ ದಾಖಲಿಸುತ್ತಿಲ್ಲ. ಅಪ್ರಾಪೆ¤ ಗರ್ಭಿಣಿಯಾದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಬೇಕು. ತಾಯಿ ಕಾರ್ಡ್ ಕೊಡುವಾಗಲಾ ದರೂ ಎಚ್ಚೆತ್ತುಕೊಳ್ಳಬೇಕು. ಆದರೆ, ಇದ್ಯಾವುದೂ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅಮಾಯಕ ಮುಗª ಕಂದಮ್ಮಗಳು ಬಾಲ ಗರ್ಭಿಣಿಯರಾಗುತ್ತಿದ್ದರೂ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿ ಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿಯಾಗಿದೆ.
ತಾಲೂಕಾದ್ಯಂತ ಬಾಲ್ಯ ವಿವಾಹ ಗಳಾಗದಂತೆ ಎಚ್ಚರ ವಹಿಸಲಾಗಿದ್ದು, ಕ್ಷೇತ್ರ ಶಿಕ್ಷಣಾ ಧಿಕಾರಿ, ತಾಲೂಕು ಕಾನೂನು ಸೇವಾ ಪ್ರಾ ಧಿಕಾರದ ಸಹಯೋಗದೊಂದಿಗೆ ಎಲ್ಲಾ ಸರ್ಕಾರಿ ಮತ್ತು ವಸತಿ ಶಾಲೆಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸ ಲಾಗಿದೆ. ಒಂದು ವೇಳೆ ಎಲ್ಲಾದರೂ ಬಾಲ್ಯ ವಿವಾಹ ಕಂಡುಬಂದಲ್ಲಿ ಜನರು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ.-ರಾಜೇಶ್, ಸಿಡಿಪಿಒ ಕೆಜಿಎಫ್ ತಾಲೂಕು
–ನಾಗೇಂದ್ರ ಕೆ.