Advertisement

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

04:11 PM Oct 05, 2024 | Team Udayavani |

ಕೋಲ್ಕತಾ: ಇತ್ತೀಚೆಗಷ್ಟೇ ಟ್ರೈನಿ ವೈದ್ಯೆಯ ಮೇಲೆ ಅ*ತ್ಯಾಚಾರ ಎಸಗಿ, ಕೊ*ಲೆಗೈದ ಘಟನೆಯ ಆಕ್ರೋಶ ತಣಿಯುವ ಮುನ್ನವೇ, ಇದೀಗ ಮನೆಯಿಂದ ಕೋಚಿಂಗ್‌ ಕ್ಲಾಸ್‌ ಗೆ ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ನಂತರ ಕೊ*ಲೆಗೈದಿರುವ ಘಟನೆ ಪಶ್ಚಿಮಬಂಗಾಳದ ದಕ್ಷಿಣ ಪರಾಗಣ ಜಿಲ್ಲೆಯಲ್ಲಿ ನಡೆದಿದ್ದು, ತೀವ್ರ ಆಕ್ರೋಶ, ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

ಇದೊಂದು ಅ*ತ್ಯಾಚಾರ ಪ್ರಕರಣ ಎಂದು ಬಿಜೆಪಿ ಆರೋಪಿಸಿದೆ. ಕೋಪೋದ್ರಿಕ್ತ ಪ್ರತಿಭಟನಾಕಾರರು ಪೊಲೀಸ್‌ ಠಾಣೆ ಅನ್ನು ಧ್ವಂಸಗೊಳಿಸಿ, ಬೆಂಕಿಹಚ್ಚಿ ಸುಟ್ಟಿರುವ ಘಟನೆ ನಡೆದಿದೆ.

ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ರಾಜ್ಯದಲ್ಲಿನ ತೃಣಮೂಲ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.

ಶುಕ್ರವಾರ ಬಾಲಕಿ ಕೋಚಿಂಗ್‌ ಕ್ಲಾಸ್‌ ಗೆ ತೆರಳಿದ್ದಳು. ಆದರೆ ಆಕೆ ಮನೆಗೆ ಬಾರದಿರುವುದನ್ನು ಕಂಡು ಪೋಷಕರು ರಾತ್ರಿ ನಾಪತ್ತೆ ದೂರು ದಾಖಲಿಸಿದ್ದರು. ಶನಿವಾರ ನಸುಕಿನ ಜಾವ ಬಾಲಕಿಯ ಶವ ಗದ್ದೆಯೊಂದರ ಬಳಿ ದೊರಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next