Advertisement

ಮದ್ರಸ ಶಿಕ್ಷಕನಿಂದ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ!

11:48 AM Feb 16, 2017 | Team Udayavani |

ಮುಜಫ‌ರನಗರ : ಹದಿನೈದು ವರ್ಷ ಪ್ರಾಯದ ಹುಡುಗನನ್ನು ಮದ್ರಸ ಶಿಕ್ಷಕನೋರ್ವ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಬಲವಂತವಾಗಿ ಬಳಸಿಕೊಂಡ ಘಟನೆ ಶಾಮ್ಲಿ ಜಿಲ್ಲೆಯ ಪಕ್ಕದಲ್ಲಿರುವ ದುಧಾಹೇರಿ ಗ್ರಾಮದಲ್ಲಿ ನಡೆದಿದೆ.

Advertisement

ಅಪ್ರಾಪ್ತ ವಯಸ್ಸಿನ ತನ್ನ ಪುತ್ರನನ್ನು ಮದ್ರಸ ಶಿಕ್ಷಕ ಸದ್ದಾಂ ಎಂಬಾತ ನಿನ್ನೆ ಬುಧವಾರ ಸಂಜೆ ಮನೆ ಪಕ್ಷದ ಹೊಲಕ್ಕೆ ಕರೆದೊಯ್ದು ಅಲ್ಲಿ ಆತನನ್ನು ಬಲವಂತದ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಬಳಸಿಕೊಂಡನೆಂದು ಹುಡುಗನ ತಾಯಿ ಪೊಲೀಸರಿಗೆ ದೂರು ನೀಡಿರುವುದಾಗಿ ಎಸ್‌ಎಚ್‌ಓ ಶೈಲೇಂದ್ರ ವರ್ಮಾ ತಿಳಿಸಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಮದ್ರಸ ಶಿಕ್ಷಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next