ಬಾದಾಮಿ: ಯರಗೊಪ್ಪ ಕ್ರಾಸ್‌ನಲ್ಲಿರುವ ಮಿನಿ ವಿಧಾನಸೌಧ ಕಚೇರಿ ಸಾರ್ವಜನಿಕರಿಗೆ ದೂರವಾಗುತ್ತದೆ ಎಂಬ ಕಾರಣದಿಂದ ಹೊಸ ಮಿನಿ ವಿಧಾನಸೌಧ ಕಟ್ಟಡವನ್ನು ಬಸ್ ನಿಲ್ದಾಣದ ಎದುರು ನಿರ್ಮಾಣಕ್ಕೆ ಕಾರ್ಯ ಯೋಜನೆ ರೂಪಿಸಲಾಗಿತ್ತು.
ಆದರೆ, ಪುರಾತತ್ವ ಇಲಾಖೆ ಅನುಮತಿ ನೀಡದೇ ಇರುವ ಕಾರಣ ಹೊಸ ಮಿನಿವಿಧಾನಸೌಧ ಕಟ್ಟಡ ನೀರಾವರಿ ನಿಗಮದ ಸ್ಥಳಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖೆ ಅನುಮತಿ ನೀಡಿದೆ.
ಬಿ.ಬಿ.ಚಿಮ್ಮನಕಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ 2017ರಲ್ಲಿ ಹೊಸ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರಿಯಾಗಿತ್ತು.
ಇದನ್ನು ಮೊದಲು ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಎದುರಿನ ಜಾಗದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಐತಿಹಾಸಿಕ ಸ್ಥಳಗಳ ಸುತ್ತಮುತ್ತ ಬರುವುದರಿಂದ ಪುರಾತತ್ವ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಸೂಚಿಸಿತ್ತು. ಹಾಲಿ ಶಾಸಕಸಿದ್ದರಾಮಯ್ಯನವರು ಪತ್ರ ಬರೆದು ಅನುಮತಿ ನೀಡಲು ಮನವಿ ಸಲ್ಲಿಸಿದ್ದರೂ ಸಹಿತ ಅನುಮತಿ ನೀಡಲು ನಿರಾಕರಿಸಿದೆ.
ಇದಕ್ಕೆ ಪುರಾತತ್ವ ಇಲಾಖೆ ಅನುಮತಿ ಪಡೆದು ಕಾಮಗಾರಿ ಆರಂಭಿಸುವಂತೆಸೂಚನೆ ನೀಡಿತ್ತು. ಇದುವರೆಗೂ ಪುರಾತತ್ವ ಇಲಾಖೆ ಅನುಮತಿ ನೀಡದೇ ಇರುವ ಕಾರಣ ಹೊಸ ಮಿನಿವಿಧಾನಸೌಧ ಕಟ್ಟಡವನ್ನು ರಾಮದುರ್ಗ ರಸ್ತೆಯ ನೀರಾವರಿ ನಿಗಮದ ಸ್ಥಳಕ್ಕೆ ಶಿಫ್ಟ್ ಮಾಡಲು ಗಂಭೀರ ಚಿಂತನೆ ನಡೆಸಿ, ಪ್ರಸ್ತಾವಣೆಯನ್ನು ಕಂದಾಯ ಇಲಾಖೆಗೆ ಸಲ್ಲಿಸಿತ್ತು. ಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆಯ ಹಂತದಲ್ಲಿ ಸ್ಥಳಾಂತರ ಕಾರ್ಯ ಚುರುಕಿನಿಂದ ನಡೆದು, ಈಗ ಜ.17 ರಂದು ಅನುಮತಿ ನೀಡಿದೆ.
ರಾಮದುರ್ಗ ರಸ್ತೆಯಲ್ಲಿರುವ ಹಾಲಿ ಮಲಪ್ರಭಾ ನೀರಾವರಿ ನಿಗಮದ(ಎಂ. ಎಲ್.ಬಿ.ಸಿ) ಕಟ್ಟಡದಲ್ಲಿನ ವಿಶಾಲವಾದ 3 ಎಕರೆ ಜಾಗದಲ್ಲಿ ಹೊಸ ಮಿನಿವಿಧಾನ ಸೌಧಕಚೇರಿ ಕಟ್ಟಡ ನಿರ್ಮಿಸಲು ಯೋಜನೆ ಮಾಡಲಾಗಿದೆ. ನೀರಾವರಿ ನಿಗಮದ ಹಳೆಯ ವಸತಿಗƒಹಗಳು ಮತ್ತು ಕಚೇರಿಯ ಒಟ್ಟು 3 ಎಕರೆ ಜಮೀನಿನಲ್ಲಿ ಹೊಸ ಕಟ್ಟಡನಿರ್ಮಾಣವಾಗಲಿದೆ.
ಹಾಲಿ ಇರುವ ಮಿನಿವಿಧಾನಸೌಧಕ್ಕೆ ಸರಕಾರಿ ಪದವಿ ಕಾಲೇಜು ಸ್ಥಳಾಂತರವಾಗಲಿದೆ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ಅನುಮತಿ ದೊರೆತ ನಂತರ ನೀರಾವರಿ ನಿಗಮದ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.