ನವದೆಹಲಿ: ಟಿ-90 ಯುದ್ಧ ಟ್ಯಾಂಕ್‌ಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಮತ್ತು ಬೆಂಗಳೂರಿನಲ್ಲಿರುವ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ (ಬಿಇಎಲ್)ಒಪ್ಪಂದಕ್ಕೆ ಸಹಿಹಾಕಿವೆ.
ಒಟ್ಟು 1,075 ಕೋಟಿ ರೂ. ಮೊತ್ತದ ಯೋಜನೆ ವ್ಯಾಪ್ತಿಯಲ್ಲಿ 957 ಟಿ-90 ಯುದ್ಧ ಟ್ಯಾಂಕ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ “ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಬಿಇಲ್, ಡಿಆರ್‌ಡಿಒ, ಇನ್‌ಸ್ಟ್ರೆಮೆಂಟ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ ಮೆಂಟ್ (ಐಡಿಆರ್‌ಇ) ಜಂಟಿಯಾಗಿ ಥರ್ಮಲ್ ಇಮೇಜ್ ಆಧಾರಿತ ಕಮಾಂಡರ್ ಸೈಟ್ ಅನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿವೆ.
ಇದನ್ನೂ ಓದಿ:ಆರೋಗ್ಯ ರಕ್ಷಣೆಗಾಗಿ ತುರ್ತುಸೇವಾ ವಾಹನ ಕೊಡುಗೆ: ಡಾ.ಪ್ರವೀಣ್ ಪವಾಡ್ ಶೆಟ್ಟರ್
ಇದರಿಂದಾಗಿ ದೇಶಿಯವಾಗಿ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅದನ್ನು ಇತರ ದೇಶಗಳಿಗೆ ರಫ್ತು ಮಾಡಲು ಅವಕಾಶವೂ ಹೆಚ್ಚಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.