Advertisement
ನಮ್ಮ ದೇಶದ ಇಡೀ ವ್ಯವಸ್ಥೆಯು ಸಹಕಾರಿ ವ್ಯವಸ್ಥೆಯಡಿಯೇ ರೂಪುಗೊಂಡಿದ್ದಲ್ಲದೆ, ಅದರಡಿಯೇ ಬೆಳೆದು ಇಂದು ನೆರಳನ್ನು ನೀಡುತ್ತಾ ಬಂದಿದೆ. ಆದರೆ ಅವುಗಳ ರೂಪ ಹಾಗೂ ಕಾರ್ಯವೈಖರಿಗಳು ಬೇರೆ ಬೇರೆ ಅಷ್ಟೇ. ಇನ್ನು ರಾಜ್ಯ – ರಾಜ್ಯಗಳಲ್ಲಿ ಸಹಕಾರ ವಲಯದ ಪರಿಧಿ, ವ್ಯಾಪ್ತಿ, ಕಾರ್ಯ ವೈಖರಿ, ಕಾನೂನು-ಕಟ್ಟಳೆಗಳು, ನೀತಿ ನಿಯಮಗಳು ಭಿನ್ನವಾಗಿರುತ್ತದೆ. ಆದರೆ ಎಲ್ಲವೂ ಸಹಕಾರ ಎಂಬ ತಣ್ತೀಕ್ಕೆ ಬದ್ಧವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇಷ್ಟಾದರೂ ಒಂದು ಸಮಗ್ರ ನೀತಿ, ಚೌಕಟ್ಟು ಎಂಬುದು ಸಿಕ್ಕಿರಲಿಲ್ಲ. ಇದರಿಂದ ಸಹಕಾರಿ ವಲಯದಲ್ಲಿನ ಅಂತಾರಾಜ್ಯಗಳಲ್ಲಿ ವ್ಯವಹಾರ ನಡೆಸುತ್ತಿರುವ ಬಹು-ರಾಜ್ಯ ಸಹಕಾರ ಸಂಘಗಳ ಮೇಲೆ ನಿಗಾ ವಹಿಸುವುದು ಕಷ್ಟಸಾಧ್ಯ ವಾಗಿತ್ತು. ಕೇಂದ್ರವು ನೂತನವಾಗಿ ಸ್ಥಾಪಿಸಿರುವ ಸಹಕಾರ ಸಚಿವಾಲಯದಿಂದ ಈಗ ಎಲ್ಲವೂ ಸಾಧ್ಯವಾಗುತ್ತಿದೆ. ರಾಜ್ಯಗಳ ಸಹಕಾರ ವ್ಯವಸ್ಥೆಗಳ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂಬ ಭಾವನೆ ನಮಗೆ ಮೂಡಿದೆ.
Related Articles
Advertisement
ಅಭಿವೃದ್ಧಿ ಪಥಕ್ಕೆ ರಹದಾರಿ: ನೂತನ ಸಹಕಾರ ಸಚಿವಾಲಯ ಸ್ಥಾಪನೆಯಿಂದ ಅನೇಕ ಉಪಯೋಗಗಳು ಸಾಧ್ಯವಾಗಲಿದೆ. ಇದನ್ನು ನಾನು ಅಭಿವೃದ್ಧಿ ಪಥಕ್ಕೆ ರಹದಾರಿ ಎಂದೇ ವಿಶ್ಲೇಷಿ ಸುತ್ತೇನೆ. ಸಹಕಾರ ರಂಗಕ್ಕಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡುವುದರಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲಬರಲಿದೆ. ಈ ವ್ಯವಸ್ಥೆಯಿಂದ ಇನ್ನು ದೇಶದಲ್ಲಿ ಸಹಕಾರಿ ವಲಯಕ್ಕೆ ಒಂದು ಚೌಕಟ್ಟು ನಿರ್ಮಾಣವಾಗಲಿದೆ. ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗಳ ರಚನೆಗೆ ಅನುಕೂಲವಾಗಲಿದೆ.
ಸಹಕಾರ ಸಿದ್ಧಾಂತ ಕಾರ್ಯನಿರ್ವಹಣೆ ಮಾಡುವುದೇ ಎಲ್ಲ ರನ್ನೂ ಉಳ್ಳವರನ್ನಾಗಿ ಮಾಡಬೇಕು ಎಂಬ ಸದಾಶಯದೊಂ ದಿಗೆ. ಅಂದರೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಮಾ ಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಿಗಬೇಕು ಎಂಬ ಮೂಲ ಆಶಯಕ್ಕೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಹಾಗೂ ಮಹಿಳಾ ವರ್ಗಗಳಿಗೆ ಆರ್ಥಿಕ ಬಲ ತುಂಬುವ ಶಕ್ತಿ ಇರುವುದು ಸಹಕಾರ ವಲಯಕ್ಕೆ ಮಾತ್ರ. ಈ ವರ್ಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು, ಸರಕಾರದ ಸಬ್ಸಿಡಿ ಯೋಜನೆಗಳಿಂದ ನೆರವು ನೀಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳ ಸಮರ್ಪಕ ಅನುಷ್ಠಾನ ಸಹಕಾರಿ ರಂಗದಿಂದ ಸಾಧ್ಯವಾಗುತ್ತಿದೆ. ಹೀಗಾಗಿ ಈ ವರ್ಗಗಳ ಅಭಿವೃದ್ಧಿ ಮತ್ತು ಸಶಕ್ತೀಕರಣಕ್ಕೆ ಕೇಂದ್ರದ ಈ ನಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ.
ಇವೆಲ್ಲದರ ಜತೆಗೆ ಬಹು-ರಾಜ್ಯ ಸಹಕಾರ ಸಂಘಗಳಿಗೆ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ, ಕಾನೂನು ರಚನೆಗೆ ಇದು ಸಹಕಾರಿಯಾಗಲಿದೆ. ಆದರೆ ರಾಜ್ಯಗಳ ಅಧಿಕಾರಕ್ಕೆ ಯಾವುದೇ ತೊಂದರೆಯಾಗಲೀ, ಹಸ್ತಕ್ಷೇಪವಾಗಲೀ ಇರುವುದಿಲ್ಲ. ಆಯಾ ರಾಜ್ಯಗಳ ನಿಯಂತ್ರಣದ ಅಧಿಕಾರಗಳು ಹಾಗೆಯೇ ಇರಲಿದೆ. ಹೀಗಾಗಿ ಸಹಕಾರಿಗಳ ಹಾಗೂ ಜನಹಿತದ ದೃಷ್ಟಿಯಿಂದ ಇದೊಂದು ಉತ್ತಮ ನಡೆ ಎಂದೇ ಹೇಳಬಹುದಾಗಿದೆ. ಬಹು-ರಾಜ್ಯ ಸಹಕಾರ ಸಂಘಗಳ ಮೇಲೆ ನಿಗಾ: ಸಹಕಾರ ಕ್ಷೇತ್ರ ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಒಂದು ವ್ಯವಸ್ಥೆ ಯೊಳಗೆ ಇರಲೇಬೇಕಾಗುತ್ತದೆ. ಬಹು-ರಾಜ್ಯ ಸಹಕಾರ ಸಂಘಗಳು (ಎಂಎಸ್‌ಸಿಎಸ್) ಬೇರೆ ಬೇರೆ ರಾಜ್ಯಗಳ ಜತೆಗೆ ವ್ಯವಹಾರಗಳನ್ನು ನಡೆಸುವಾಗ ಅವುಗಳಿಗೆ ಒಂದು ಪರಿಧಿ, ನೀತಿ-ನಿರೂಪಣೆಗಳು ಎಂಬುದು ಇರಲಿಲ್ಲ. ಆಯಾ ರಾಜ್ಯ ಗಳಿಗೂ ಇವುಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ 2000-2001ರಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈಗ ಇಂಥ ಒಂದು ಸಂಸ್ಥೆಗಳ ಬಲ ವರ್ಧನೆ ಹಾಗೂ ರಾಜ್ಯಗಳಿಗೂ ಪೂರಕವಾಗಿ ಬೆಂಬಲವನ್ನು ಕೊಡುವ ನಿಟ್ಟಿನಲ್ಲಿ ನೂತನ ಸಚಿವಾಲಯವು ಕಾರ್ಯ ನಿರ್ವಹಣೆ ಮಾಡಲಿದೆ.
– ಎಸ್.ಟಿ. ಸೋಮಶೇಖರ್, ಸಹಕಾರ ಸಚಿವರು