Advertisement
124 ವರ್ಷ ಇತಿಹಾಸ ಹೊಂದಿರುವ ಮೈಸೂರು ಮೃಗಾಲಯವೆಂದೇ ಕರೆಯಲಾಗುವ ಶ್ರೀಚಾಮರಾಜೇಂದ್ರ ಮೃಗಾ ಲಯಕ್ಕೆ ವಲಸೆ ಬಂದ ಹಕ್ಕಿಗಳಿಗೆ ಎಚ್5ಎನ್8 ಸೋಂಕು ತಗುಲಿ ಸಾವನ್ನಪ್ಪಿ ರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಉಂಟುಮಾಡಿದೆ. ಮೈಸೂರು ಮೃಗಾಲಯ ದಲ್ಲಿ 79 ವಿವಿಧ ಪ್ರಭೇದಗಳ 813 ಹಕ್ಕಿಗಳಿದ್ದು, ಈ ಎಲ್ಲ ಹಕ್ಕಿಗಳ ಹಿಕ್ಕೆಗಳ ಮಾದರಿ ಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಅನಿಮಲ್ ಹೆಲ್ತ್ ಮತ್ತು ವೆಟರ್ನರಿ ಬಯೋ ಲಾಜಿಕಲ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Related Articles
Advertisement
ಮೃಗಾಲಯದ ಪ್ರಾಣಿಗಳಿಗೆ ಆಹಾರವನ್ನು ಹೊತ್ತು ಬರುವ ವಾಹನಗಳ ಚಕ್ರಗಳಿಗೂ ವೈರಾಣು ನಿಯಂತ್ರಣದ ಔಷಧವನ್ನು ಸಿಂಪಡಿಸಲಾಗುತ್ತಿದೆ. ಮೃಗಾಲಯದ ನೌಕರರು ಅವರಿಗೆ ಗೊತ್ತುಪಡಿಸಿದ ಕೆಲಸದ ಸ್ಥಳಕ್ಕೆ ನಿಗದಿಪಡಿಸಿದ ಪ್ರವೇಶ ದ್ವಾರದಿಂದಲೇ ಸಾಗಿ ಅದೇ ದ್ವಾರದಿಂದ ವಾಪಸಾಗಬೇಕು. ನೌಕರರು ಮೃಗಾಲಯದಲ್ಲಿ ಅವರಿಗೆ ಗೊತ್ತುಪಡಿಸಿದ ಪ್ರದೇಶ ಬಿಟ್ಟು ಬೇರೆ ಕಡೆ ಹೋಗದಂತೆ ಕಟ್ಟಪ್ಪಣೆ ವಿಧಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ಯೋಗದಲ್ಲಿ ಮೃಗಾಲಯದ ಸಿಬ್ಬಂದಿ ವರ್ಗ ದವರ ಆರೋಗ್ಯ ತಪಾಸಣೆ ನಡೆಸಿ, ಟಾಮಿಫೂ ಮಾತ್ರೆ ನೀಡ ಲಾಗಿದೆ. ಸುರಕ್ಷತಾ ಪರಿಕರಗಳ 200 ಕಿಟ್‌ಗಳನ್ನು ವಿತರಿಸಲಾಗಿದೆ. ಹಕ್ಕಿಜ್ವರ ಮನುಷ್ಯನಿಗೆ ಹರಡುವುದಿಲ್ಲ. ಆದರೆ, ವಲಸೆ ಬಂದ ಕೆಲ ಹಕ್ಕಿಗಳು ಎಚ್5ಎನ್8ನಿಂದ ಸಾವನ್ನಪ್ಪಿರುವುದರಿಂದ ಚಳಿಗಾಲದ ಈ ಶೀತ ವಾತಾವರಣದಲ್ಲಿ ವೈರಾಣುಗಳು ವೇಗವಾಗಿ ಹರಡುತ್ತದೆ. ಹೀಗಾಗಿ ಅಗತ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಂಜಿ ಕೆರೆ ಮುಕ್ತಮೈಸೂರು: ಮೃಗಾಲಯವನ್ನು ಹಕ್ಕಿಜ್ವರ ಹರಡುವಿಕೆ ಭೀತಿಯಿಂದ ಶ್ರೀ ಚಾಮರಾಜೇಂದ್ರ ಮೃಗಾಲ ಯಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸಿದ್ದರೂ ಪಕ್ಕದಲ್ಲೇ ಇರುವ ಕಾರಂಜಿ ಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿಡಲಾಗಿದೆ. ಮುಂಜಾ ಗ್ರತಾ ಕ್ರಮವಾಗಿ ಇಲ್ಲಿಯೂ ಔಷಧಗಳ ಸಿಂಪಡಣೆ ಕಾರ್ಯ ಮುಂದುವರಿದಿದೆ. ಹಕ್ಕಿಜ್ವರ ಇಲ್ಲಿಗೂ ವ್ಯಾಪಿಸಿರುವುದು ಪತ್ತೆಯಾದಲ್ಲಿ ಕಾರಂಜಿ ಕೆರೆಯನ್ನೂ ಕೆಲ ಕಾಲ ಮುಚ್ಚ ಬೇಕಾಗುತ್ತದೆ ಎಂದು ಮೃಗಾ ಲಯದ ಅಧಿಕಾರಿಗಳು ಹೇಳಿದ್ದಾರೆ.