ಭಾರತೀನಗರ: ಸಮೀಪದ ಗುರುದೇವರ ಹಳ್ಳಿ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಯುವಕ ಪುಟ್ಟಸ್ವಾಮಿ ಎಂಬುವರು ಶಾಲೆಯ ಸ್ಥಿತಿ ಮತ್ತು ಸಮಸ್ಯೆ ಗಳನ್ನು ವಾಟ್ಸ್‌ಆ್ಯಪ್ ಮೂಲಕ ಸಚಿವರಿಗೆ ಕಳುಹಿಸಿದ್ದು, ಈ ಹಿನ್ನಲೆಯಲ್ಲಿ ಭೇಟಿ ನೀಡಿದ ಅವರು, ಸರ್ಕಾರಿ ಶಾಲೆ ಆಸ್ಪತ್ರೆ ಕ್ವಾಟ್ರಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದರು.
ಬಳಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಅವರಿಂದ ವಿದ್ಯಾರ್ಥಿಗಳ ಸಂಖ್ಯೆ ತಿಳಿದ ಅವರು, ಮಕ್ಕಳನ್ನು ಆತ್ಮೀಯವಾಗಿ ಮಾತ ನಾಡಿಸಿದರು. ಉತ್ತಮವಾಗಿ ಕಲಿಯಬೇಕು ಎಂದು ಕಿವಿ ಮಾತು ಹೇಳಿದರು. ಉಪ ನಿರ್ದೇಶಕ ರಘುನಂದನ್ ಮಾತನಾಡಿ, ಕಾಲೋನಿಯಲ್ಲಿ ಶಾಲೆಗೆ ಸರ್ಕಾರಿ ಜಾಗ ದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕ ಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಆ ಜಾಗ ನಮಗೆ ಸೇರಬೇಕು ಎಂದು ನ್ಯಾಯಾಲ ಯದಲ್ಲಿ ತಡೆ ಆಜ್ಞೆ ಪಡೆದಿದ್ದಾರೆ. ಶಾಲಾ ಕಟ್ಟಡಕ್ಕೆ ಸಮಸ್ಯೆ ಉಂಟಾಗಲು ಕಾರಣವಾ ಗಿದೆ ಎಂದು ಶಾಲೆಯ ಸ್ಥಿತಿ-ಗತಿಯ ಬಗ್ಗೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್‌ಕುಮಾರ್ ಪ್ರಕರಣ ನ್ಯಾಯಾಲಯದಲ್ಲಿ ರುವುದರಿಂದ ಸರ್ಕಾರಿ ವಕೀಲರ ಬಳಿ ಈ ಬಗ್ಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಿ ಕಟ್ಟಡ ನಿರ್ಮಾಣಕ್ಕೆ ಸೌಕರ್ಯ ನೀಡುವುದಾಗಿ ಭರವಸೆ ನೀಡಿದರು.
ವಿವಾದಿತ ಶಾಲಾ ಜಾಗಕ್ಕೆ ತೆರಳಿದ ಸಚಿವರು, ನಿವೇಶನದ ಮಾಹಿತಿ ಪುಟ್ಟಸ್ವಾಮಿ ಅವರಿಂದ ಪಡೆಯುತಿದ್ದಂತೆ ಸ್ಥಳಕ್ಕೆ ತೆರಳಿದ ನಾಗರಾಜು, ಈ ಜಾಗ ನಮಗೆ ಸೇರಬೇಕು ಈ ಬಗ್ಗೆ ನ್ಯಾಯಾಲಯದ ಆದೇಶವಾಗಿದೆ ಎನ್ನುತಿದ್ದಂತೆ ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ವಕೀಲರ ಜೊತೆ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದರು.
ಬಿಇಒ ರೇಣುಕಮ್ಮ, ಸಿಆರ್‌ಪಿ ವಿಶ್ವ ನಾಥ್, ಎಸ್‌ಡಿಎಂಸಿ ಅಧ್ಯಕ್ಷ ಬಸವಯ್ಯ, ಮುಖಂಡರಾದ ಬೋರೇಗೌಡ, ಪಾಪಣ್ಣ ಸೇರಿದಂತೆ ಹಲವರಿದ್ದರು.