Advertisement

Government: ಸಚಿವರ ಆತುರದ ಹೇಳಿಕೆ: ಸರಕಾರ ಇಕ್ಕಟ್ಟಿಗೆ?

09:05 PM May 26, 2023 | Team Udayavani |

ಬೆಂಗಳೂರು: ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವಾರವಷ್ಟೇ ಆಗಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿಲ್ಲ. ಅದಾಗಲೇ ಕೆಲವು ಸಚಿವರು ಕಾನೂನು ಮತ್ತು ಕೋಮು ಸೂಕ್ಷ್ಮ ವಿಚಾರಗಳಲ್ಲಿ ಅತ್ಯಾತುರದ ಹೇಳಿಕೆಗಳನ್ನು ಕೊಡಲಾರಂಭಿಸಿದ್ದಾರೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ. ಆದರೆ ಸಚಿವರ ಇಂತಹ ಹೇಳಿಕೆಗಳು ಮುಂದಿನ ದಿನಗಳಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಂತೂ ಖಚಿತ.

Advertisement

ಮುಖ್ಯವಾಗಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಮೀಸಲಾತಿ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಹಿಜಾಬ್‌ ಮತ್ತಿತರ ಪ್ರಕರಣಗಳಲ್ಲಿ “ಅಪಕ್ವ’ ಮಾತುಗಳು ಕಾಂಗ್ರೆಸ್‌ನ ಕೆಲವು ಸಚಿವರು, ಶಾಸಕರಿಂದ ಕೇಳಿ ಬರುತ್ತಿವೆ. ಕಾಯ್ದೆ ಮತ್ತು ನೀತಿಗಳನ್ನು ರೂಪಿಸುವ ಅಧಿಕಾರ ಇರುವಂತೆ ಅಂತಹ ಕಾಯ್ದೆ ಅಥವಾ ನೀತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿರುವಾಗಲೂ ಅವುಗಳನ್ನು ಹಿಂಪಡೆದುಕೊಳ್ಳುವ ಅಧಿಕಾರ ಸರಕಾರಕ್ಕೆ ಇರುತ್ತದೆ. ಆದರೆ ಅದರ ಬಗ್ಗೆ ಹೇಳಿಕೆ ನೀಡಲು ಈಗ ಸಕಾಲವಲ್ಲ.
ಪಠ್ಯಪುಸ್ತಕ ಪರಿಷ್ಕರಣೆ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ರದ್ದು ಕಾಯ್ದೆ ಎಲ್ಲವನ್ನೂ ಮತ್ತೂಮ್ಮೆ ವಾಪಸ್‌ ತಂದು ಪರಿಷ್ಕರಣೆ ಮಾಡಿಯೇ ಸಿದ್ಧ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಇದರ ಜತೆಗೆ ಹಿಜಾಬ್‌, ಆರೆಸ್ಸೆಸ್‌ ನಿಷೇಧದ ವಿಚಾರವನ್ನೂ ಅವರು ಪ್ರಸ್ತಾವಿಸಿದ್ದಾರೆ. ಆದರೆ ಮೀಸಲಾತಿ ಹೆಚ್ಚಳ ಸಹಿತ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಎಪಿಎಂಸಿ ರದ್ದು ಕಾಯ್ದೆ ವಿಚಾರ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣ ಹಂತದಲ್ಲಿದೆ. ಹಿಜಾಬ್‌ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಈ ಹಂತದಲ್ಲಿ ಸರಕಾರ ಅಥವಾ ಸಚಿವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ.

ಅದೇ ರೀತಿ ಪೊಲೀಸ್‌ ಇಲಾಖೆಯನ್ನು ಕೇಸರಿಕರಣ ಮಾಡಲು ನಮ್ಮ ಸರಕಾ‌ುವುದಿಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಾತು ಸಹಿಕ ಕೆಲವು ಸಚಿವರ “ನಿಷೇಧ’ದ ಮಾತುಗಳ ಮೂಲಕ ಕಾಂಗ್ರೆಸ್‌ ಸರಕಾರ ಆರಂಭದ ದಿನಗಳಿಂದಲೇ ಬಿಜೆಪಿಗೆ ಒಂದೊಂದಾಗಿ ರಾಜಕೀಯ ಅಸ್ತ್ರಗಳನ್ನು ಕೊಡುತ್ತಿದೆ.

ಸರಕಾರಕ್ಕೆ ತಾನೇ ರೂಪಿಸಿರುವ ಅಥವಾ ಹಿಂದಿನ ಸರಕಾರಗಳು ಜಾರಿಗೆ ತಂದಿರುವ ಕಾಯ್ದೆ ಮತ್ತು ನೀತಿಗಳನ್ನು ಹಿಂಪಡೆದುಕೊಳ್ಳಲು ಅಧಿಕಾರ ಇರುತ್ತದೆ. ಯಾವುದೇ ಕಾಯ್ದೆ ಅಥವಾ ನೀತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟು ವಿಚಾರಣ ಹಂತದಲ್ಲಿರುವಾಗಲೂ ಸರಕಾರ ಕಾಯ್ದೆ ಅಥವಾ ನೀತಿಗಳನ್ನು ಹಿಂಪಡೆದುಕೊಳ್ಳಬಹುದು. ಕಾಯ್ದೆಗಳನ್ನು ಕಾನೂನು ರೀತಿ ರದ್ದುಪಡಿಸಬೇಕಾದರೆ ಅವುಗಳನ್ನು ಶಾಸನಸಭೆಯಲ್ಲಿ ಮಂಡಿಸಿ ನಿರಸನಗೊಳಿಸಬೇಕು. ಒಂದು ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಥವಾ ತರಾತುರಿಯ ಕ್ರಮ ಜರಗಿಸಬಾರದು ಎಂದು ನ್ಯಾಯಾಲಯ ಹೇಳಿದ್ದರೆ ಅದು ಇತ್ಯರ್ಥ ಆಗುವ ತನಕ ಸರಕಾರದ ಮುಂದೆ ಸೀಮಿತ ಅವಕಾಶಗಳು ಇರುತ್ತವೆ. ಹೊರಗಡೆ ಯಾರು ಏನೇ ಹೇಳಿದರೂ ನ್ಯಾಯಾಲಯಕ್ಕೆ ನೀಡುವ ಸರಕಾರದ ಲಿಖೀತ ಹೇಳಿಕೆಯೇ ಅಂತಿಮವಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಯಾವುದೇ ಕಾನೂನು ಜಾರಿಗೆ ಬಂದ ಮೇಲೆ ಅದರ ಮಾನ್ಯತೆ ಅಥವಾ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಕಾಯ್ದೆಗಳನ್ನು ರದ್ದುಪಡಿಸುವ ಅಧಿಕಾರ ಕೋರ್ಟ್‌ಗಿದೆ. ಒಂದು ವೇಳೆ ಯಾವುದೇ ಕಾಯ್ದೆಯು ಸುಪ್ರೀಂಕೋರ್ಟ್‌ ಇಲ್ಲವೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಇದ್ದು, ಅಂತಿಮ ತೀರ್ಪು ಬರುವುದಕ್ಕಿಂತ ಮುಂಚೆಯೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸರಿಯಾದ ಕ್ರಮವಲ್ಲ.
– ಬಿ.ವಿ. ಆಚಾರ್ಯ, ಮಾಜಿ ಅಡ್ವೊಕೇಟ್‌ ಜನರಲ್‌

Advertisement

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next