ವಿಧಾನಸಭೆ: ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಸಚಿವರ ಗೈರು ಹಾಜರಿಗೆ ಆಡಳಿತ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಪೀಕರ್ ಕಾಗೇರಿ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷಯ ಪ್ರಸ್ತಾಪಿಸಿದ ಶಾಸಕ ಬಸನಗೌಡ ಯತ್ನಾಳ್ ಸಭೆಗೆ ಬರಲ್ಲ ಎಂದ ಮೇಲೆ ಸಚಿವರು ಯಾಕೆ ಆಗಬೇಕು? ಲಾಬಿ ಮಾಡಿ ಸಚಿವರು ಆಗುವುದು ಯಾಕೆ? ಕೆಲಸ ಮಾಡುವವರು ಸಚಿವರಾಗುತ್ತಾರೆ ಬಿಡಿ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಉಕ್ರೇನಿನಿಂದ ವಾಪಸ್ ಬಂದ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಸಚಿವ ಅಶ್ವತ್ಥ ನಾರಾಯಣ
ಸಚಿವರ ಗೈರು ಹಾಜರಿಗೆ ಸ್ಪೀಕರ್ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ನೆಪ ಹೇಳಿ ಸದನಕ್ಕೆ ಗೈರು ಆಗುತ್ತಿರುವುದು ಸರಿಯಲ್ಲ. ನಿನ್ನೆ ಮೊನ್ನೆಯಿಂದ ನಾನು ಗಮನಿಸುತ್ತೇದ್ದೇನೆ. ಸದನಕ್ಕೆ ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಸಚಿವರಲ್ಲಿದೆ. ಇದು ಶೋಭೆ ತರುವುದಿಲ್ಲ. ಪ್ರಶ್ನೋತ್ತರ ಕಲಾಪ ಮತ್ತು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದವರು ಹಾಜರಿಬೇಕು ಎಂದರು.
ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರುತ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗ್ತಾರೆ. ಸಚಿವರು ಸದನಕ್ಕೆ ಬರುವಂತೆ ನೀವೇ ಏನಾದ್ರೂ ರೂಲಿಂಗ್ ಕೊಡಬೇಕು. ಸಚಿವರು ಇಲ್ಲದಿದ್ದ ಮೇಲೆ ಮತ್ತೆ ಯಾಕೆ ಸದನ ನಡೆಸುತ್ತೀರಿ ಎಂದು ಸ್ಪೀಕರ್ ಗೆ ಯತ್ನಾಳ ಮನವಿ ಮಾಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ 25, ಕಾಂಗ್ರೆಸ್ ನ 13, ಜೆಡಿಎಸ್ ನ 7 ಮಂದಿ ಸದಸ್ಯರು ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದರು.