ಚಾಮರಾಜನಗರ: ಜಿಲ್ಲಾಸ್ಪತ್ರೆಆವರಣದಲ್ಲಿ 6,000 ಲೀಟರ್‌ಸಾಮರ್ಥ್ಯವುಳ್ಳ ದ್ರವ ವೈದ್ಯಕೀಯಆಮ್ಲಜನಕ (ಎಲ್‌ಎಂಒ) ಘಟಕಕ್ಕೆ ಜಿಲ್ಲಾಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ಗುರುವಾರ ಚಾಲನೆ ನೀಡಿದರು.
ಕೋವಿಡ್ ಚಿಕಿತ್ಸೆಗೆ ಅವಶ್ಯವಿರುವಆಮ್ಲಜನಕ ಪೂರೈಸುವ ಲಿಕ್ವಿಡ್ ಮೆಡಿಕಲ್‌ಆಕ್ಸಿಜನ್ ಪ್ಲಾಂಟ್‌ನಿಂದ ಆಮ್ಲಜನಕಸೌಲಭ್ಯ ಮತ್ತಷ್ಟು ಸರಾಗವಾಗಿದೊರೆಯಲಿದೆ.ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯ ಸಮಸ್ಯೆ ಇತ್ತು. ಇದೀಗಆಮ್ಲಜನಕ ಘಟಕ ಆರಂಭವಾಗಿರುವುದರಿಂದ ಈ ಸಮಸ್ಯೆ ನಿವಾರಣೆಯಾದಂತಾಗಿದೆ.
ಉಸ್ತುವಾರಿ ಸಚಿವರು ನಗರದಯಡಪುರ ಬಳಿ ನಿರ್ಮಾಣವಾಗುತ್ತಿರುವವೈದ್ಯಕೀಯ ಕಾಲೇಜಿನ ಆಸ್ಪತ್ರೆಯಮೊದಲ ಎರಡು ಮಹಡಿಯಲ್ಲಿಕೋವಿಡ್ ಆಸ್ಪತ್ರೆಯನ್ನು ತುರ್ತಾಗಿಆರಂಭಿಸುವ ಸಂಬಂಧ ಕೈಗೊಂಡಿರುವಸಿದ್ಧತೆಗಳನ್ನು ಪರಿಶೀಲಿಸಿದರು.
ಬಳಿಕಸಮೀಪದ ವೈದ್ಯಕೀಯ ಕಾಲೇಜಿಗೆ ಭೇಟಿನೀಡಿ ತಾತ್ಕಲಿಕವಾಗಿ ಕೋವಿಡ್ ಕೇಂದ್ರಆರಂಭಿಸಲು ಸಜ್ಜುಗೊಳಿಸಿರುವವ್ಯವಸ್ಥೆಗಳನ್ನು ಪರಿಶೀಲಿಸಿದರು.ನಗರದ ಮಾದಾಪುರದಲ್ಲಿ ಪ್ರಥಮದರ್ಜೆ ಕಾಲೇಜು ಕಟ್ಟಡದಲ್ಲಿ ಸಿದ್ದಮಾಡಿರುವ ಕೋವಿಡ್ ಕೇರ್ ಕೇಂದ್ರವನ್ನುವೀಕ್ಷಿಸಿದರು.
ಕೊರೊನಾ ವಾರಿಯರ್ಸ್‌ಗಳಿಗಾಗಿಯೇ ಈ ಕೋವಿಡ್ ಕೇಂದ್ರವನ್ನುಮೀಸಲಿಡುವ ಉದ್ದೇಶ ದಿಂದವ್ಯವಸ್ಥೆಗಳಿಸಲಾಗಿರುವ ಸಿದ್ದತೆ ಯನ್ನುಪರಿಶೀಲನೆ ನಡೆಸಿದರು.ಶಾಸಕ ಎನ್. ಮಹೇಶ್, ಜಿಲ್ಲಾಧಿಕಾರಿಡಾ. ಎಂ.ಆರ್. ರವಿ, ಡಿಎಚ್‌ಓ ಡಾ.ಎಂ.ಸಿ. ರವಿ, ವೈದ್ಯಕೀಯ ಕಾಲೇಜಿನಡೀನ್ ಡಾ. ಸಂಜೀವ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ,ಡಿವೈಎಸ್‌ಪಿ ಪ್ರಿಯದರ್ಶಿನಿ ಇದ್ದರು.