Advertisement

ಅಯ್ಯಪ್ಪ ಭಕ್ತರ ಕಾರಿಗೆ ಬೆಂಕಿ:ಆಪತ್ಬಾಂಧವನಾದ ಸಚಿವ ಖಾದರ್‌ 

10:25 AM Jan 14, 2017 | |

ಮಂಗಳೂರು: ಇಲ್ಲಿ ಶಬರಿಮಲೆಯಿಂದ ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಭಸ್ಮವಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಅವರು ಸ್ವಯಂ ರಕ್ಷಣೆಗೆ ಮುಂದಾಗಿ ಕರ್ತವ್ಯ ಪ್ರಜ್ಞೆ ಮರೆದಿದ್ದಾರೆ. 

Advertisement

ಧಾರವಾಡದ ಕುಂದಗೋಳದ ಐವರು ಭಕ್ತರು ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಕಾರಿಗೆ ಪಂಪ್‌ವೆಲ್‌-ನಂತೂರ್‌ ಸರ್ಕಲ್‌ ಬಳಿ ಏಕಾಏಕಿ ಬೆಂಕಿ  ಹೊತ್ತಿಕೊಂಡಿದೆ. ಇದೇ ವೇಳೆ ಮುಂಬಯಿಯಿಂದ ವಿಮಾನದಲ್ಲಿ ಬಂದಿಳಿದ ಸಚಿವ ಖಾದರ್‌ ಅವರು ಬೊಳಿಯಾರ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಬೆಂಕಿ ಕಂಡು ಕೂಡಲೇ ಕಾರು ನಿಲ್ಲಿಸಿದ ಸಚಿವರು ಸ್ವಯಂ ತಮ್ಮ ಕಾರಿನಲ್ಲಿದ್ದ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ ಮಾತ್ರವಲ್ಲದೆ ಮಣ್ಣನ್ನು ಬೆಂಕಿಗೆ ಎಸೆದು ತಹಬದಿಗೆ ತರಲು ಪ್ರಯತ್ನಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿತ್ತು.ಸಚಿವರು ಮತ್ತು ಕಾರಿನಲ್ಲಿದ್ದವರು ಅಯ್ಯಪ್ಪ ಭಕ್ತರ ಕೆಲ ಸೊತ್ತುಗಳನ್ನು ಹೊರಗೆಳೆದು ಹಾಕಿದ್ದರು. 

ಇಷ್ಟು ಮಾತ್ರವಲ್ಲದೆ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿ , ಪ್ರಯಾಣ ಮುಂದುವರಿಸಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೇಟ್‌ ದೊರಕಿಸಿ ಕೊಟ್ಟು ಹೃದಯ ವೈಶಾಲ್ಯತೆಯನ್ನು ಮೆರೆದರು. 

ಘಟನೆ ಸಂದರ್ಭ ಖಾದರ್‌ ಅವರೊಂದಿಗೆ ದೀಪಕ್‌ ಪಿಲಾರ್‌, ಸುರೇಶ್‌ ಶಕ್ತಿ ಜೊಸೆಫ್, ಪಿಯೂಸ್‌ , ಎನ್‌.ಎಸ್‌.ಕರೀಂ ,ಸಿರಾಜ್‌ ಕಿನ್ಯ,ರಫೀಕ್‌ ಅಂಬ್ಲಿಮೊಗರು ಮತ್ತು ಆಪ್ತ ಸಹಾಯಕ ಲಿಬ್ಝತ್‌ ಅವರಿದ್ದು ಬೆಂಕಿ ನಂದಿಸಲು ನೆರವಾದರು.

ಸಚಿವ ಖಾದರ್‌ ಅವರು ಈ ಹಿಂದೆಯೂ ತುರ್ತಾಗಿ ನೆರವಾಗುವ ಕಾರ್ಯಗಳನ್ನು ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next