Advertisement

ಬಂಡೀಪುರ ಹೆದ್ದಾರಿ ಅಗಲೀಕರಣಕ್ಕೆ ಅವಕಾಶ ಕೊಡುವುದಿಲ್ಲ: ಅರಣ್ಯ ಸಚಿವ ಉಮೇಶ್ ಕತ್ತಿ

01:57 PM Aug 26, 2021 | Team Udayavani |

ಗುಂಡ್ಲುಪೇಟೆ : ಬಂಡೀಪುರ ಹೆದ್ದಾರಿ ಅಗಲೀಕರಣ ಹಾಗೂ ರಾತ್ರಿ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಗಲೀಕರಣದ ಪ್ರಸ್ತಾಪಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆಯಲಾಗಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ವಾಯ್ಸ್ ಮೆಸೇಜ್ ಮಾಡಿ, ಕಾರು ಸಮೇತ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ಪ್ರತಿ ತಿಂಗಳಿಗೆ ಓರ್ವ ವ್ಯಕ್ತಿಗೆ 5 ಕೆ.ಜಿ.ಅಕ್ಕಿ ಸಾಕು. ಆಹಾರ ಭದ್ರತೆಯಡಿ ಈಗಾಗಲೇ ಅದನ್ನು 4.1 ಕೋಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ ಇದನ್ನು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡಿಕೊಂಡು 10 ಕೆ.ಜಿ ಕೊಡುತ್ತೇನೆ ಎನ್ನುತ್ತಿದ್ದಾರೆ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಶೇ.70ರಷ್ಟು ಪಡಿತರದಾರರು ಇಕೆವೈಸಿ ಮಾಡಿಸಿದ್ದಾರೆ. ಸದ್ಯದಲ್ಲೆ ಶೇ.100ರಷ್ಟು ಸಂಪೂರ್ಣ ಗುರಿ ಸಾಧನೆಯಾಗಲಿದೆ. ನಂತರ ಅನರ್ಹ ಪಡಿತರದಾರರನ್ನು ಕೈಬಿಟ್ಟು ಅಂತಿಮ ಪಡಿತರದಾರರ ಪಟ್ಟಿ ಪ್ರಕಟಿಸಲಾಗುವುದು ಎಂದಿದ್ದಾರೆ

Advertisement

ನಾನು ಪರ್ಮನೆಂಟ್ ಮುಖ್ಯ ಮಂತ್ರಿ ಆಕಾಂಕ್ಷಿ :  ನಾನು ಯಾವಾಗಲೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ನನಗೀಗ 60 ವರ್ಷ ವಯಸ್ಸು, ಇನ್ನು 15 ವರ್ಷವಿದ್ದು ಮುಂದೆ ನೋಡೋಣ ಎಂದು ಸಿಎಂ ಆಗುವ ಬಯಕೆ ಮತ್ತೊಮ್ಮೆ ಹೊರಹಾಕಿದ್ದಾರೆ.

ಕ್ರಾಂತಿಕಾರಕ ಯೋಜನೆ ತರುತ್ತೇನೆಂದು ಹೇಳಿರುವ ಎಚ್ ಡಿ ಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಧಿಕಾರಕ್ಕೆ ಬರುವುದಿಲ್ಲ. ಆದ್ದರಿಂದಲೇ ಈ ಮಾತು ಆಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಸಿಎಂ ನಿರ್ಧಾರಕ್ಕೆ ಬದ್ಧ : ಗಣೇಶೋತ್ಸವಕ್ಕೆ ಅವಕಾಶ ನೀಡದಿರುವ ಸಂಬಂಧ ಅವರು ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧ, ಅವರು ಯಾವ ತೀರ್ಮಾನ ತೆಗೆದುಕೊಳ್ಳೋತ್ತಾರೋ ನೋಡೋಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಶಾಸಕರಿಂದಲೇ ರಾಜಕೀಯ ನಿವೃತ್ತಿ ಸವಾಲು

Advertisement

Udayavani is now on Telegram. Click here to join our channel and stay updated with the latest news.

Next