Advertisement

ಸೋಂಕಿತರ ನೆರವಿಗೆ ನಿಂತ ಕತ್ತಿ ಸಹೋದರರು

08:35 PM May 27, 2021 | Team Udayavani |

ವಿಶ್ವನಾಥ ನಾಯಿಕ

Advertisement

ಹುಕ್ಕೇರಿ: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಮೂರು ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಕೊರೊನಾ ಸೋಂಕಿತರಿಗೆ ವರದಾನವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ತಾಲೂಕಾಡಳಿತ ಹಲವಾರು ದಿಟ್ಟ ನಿರ್ಣಯಗಳೊಂದಿಗೆ ಹೆಜ್ಜೆ ಇರಿಸಿದೆ.

ಹುಕ್ಕೇರಿ ಪಟ್ಟಣ ಹಾಗೂ ಸಂಕೇಶ್ವರ ನಗರಗಳು ಸ್ವಯಂ ಲಾಕ್‌ಡೌನ್‌ ಮಾಡಿಕೊಂಡ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಮಾರ್ಷಲ್‌ ಪಡೆ, ಪುರಸಭೆಗಳು, ಗ್ರಾಮ ಪಂಚಾಯಿತಿಗಳು, ತಾಲೂಕು ಆಡಳಿತ, ಕೊರೊನಾ ನಿಯಂತ್ರಣ ಟಾಸ್ಕ್ ಸಮಿತಿ, ಮಹಾವೀರ ಸಮೂಹ ಸಂಸ್ಥೆ, ನಿಡಸೋಸಿ ಸಿದ್ಧಸಂಸ್ಥಾನಮಠ, ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠ ಹೀಗೆ ಅನೇಕ ಸಂಘ-ಸಂಸ್ತೆಗಳು, ಮಠಮಾನ್ಯಗಳು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿವೆ. ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಸಿಬ್ಬಂದಿ ವರ್ಗ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹುಕ್ಕೇರಿ ನಗರದ ಹೊರವಲಯದ ಕ್ಯಾರಗುಡ್ಡ ಬಳಿಯ ಚನ್ನಮ ವಸತಿ ವಸತಿ ನಿಲಯದಲ್ಲಿ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪನೆಗೊಂಡಿದೆ. ಇಲ್ಲಿ ಕೊರೊನಾ ಸೋಂಕಿತರಿಗೆ ಪ್ರೀತಿಯಿಂದ ನೋಡಿಕೊಳ್ಳುವುದರ ಜತೆಗೆ ಆರೈಕೆ ಮಾಡಲಾಗುತ್ತಿದೆ. ದಾನಿಗಳ ಸಹಕಾರದಿಂದ ತರಕಾರಿ, ಹಣ್ಣು, ಊಟ ನೀಡುವುದರೊಂದಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ. ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಸ್‌ ಎಸ್‌ ಹಿರೇಮಠ ಅವರ ಮೇಲ್ವಿಚಾರಣೆಯಲ್ಲಿ ಅನುಭವಿ ಯುವಕ ಶಿಕ್ಷಕರ ತಂಡವೊಂದು ದಿನನಿತ್ಯ ಸೇವೆಯಲ್ಲಿ ತೊಡಗಿದೆ. ಈ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರು ಸೇವೆಯನ್ನು ಮೆಚ್ಚಿ ಭಾವುಕರಾಗುತ್ತಾರೆ.

ಕತ್ತಿ ಸಹೋದರರು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಯಾವುದೆ ಕೊರತೆಯಾಗದಂತೆ ನಿಗಾ ವಹಿಸಿದ್ದಾರೆ. ವಿಶ್ವರಾಜ ಟ್ರಸ್ಟ್‌ ವತಿಯಿಂದ ಆಕ್ಸಿಜನ್‌ ಉತ್ಪಾದನಾ ಘಟಕ ಹಾಗೂ ಸಿಟಿಸ್ಕಾನ್‌ ಘಟಕ ನಿರ್ಮಿಸಲು ಸಿದ್ಧತೆ ಕೈಗೊಂಡಿದ್ದಾರೆ ತಾಲೂಕು ಆಸ್ಪತ್ರೆ ಜತೆ ಹುಕ್ಕೇರಿ, ಸಂಕೇಶ್ವರ ಸರಕಾರಿ ಆಸ್ಪತ್ರೆಯಲ್ಲಿ 100 ಬೆಡ್‌ ಹಾಸಿಗೆ, ಆಕ್ಸಿಜನ್‌, ವೆಂಟಿಲೇಟರ್‌ ಅಳವಡಿಸಲಾಗಿದೆ. ವೈದ್ಯರು, ಫ್ರಂಟ್‌ ವಾರಿಯರ್ ಸೋಂಕಿತರ ನೆರವಿಗೆ ನಿಂತಿದ್ದಾರೆ. ತಾಲೂಕಿನ ಹಿರಣ್ಯಕೇಶಿ ಹಾಗೂ ವಿಶ್ವ ಶುಗರ್‌ ಕಾರ್ಖಾನೆಯ ಆಂಬ್ಯುಲೆನ್ಸ್‌ ಹಾಗೂ ಆಮ್ಲಜನಕ ಸಿಲಿಂಡರ್‌ ಸರಬರಾಜು ವ್ಯವಸ್ಥೆಯನ್ನು ಆಡಳಿತ ಮಂಡಳಿಗೆ ವಹಿಸಿದ್ದಾರೆ.

Advertisement

ತಾಲೂಕಿನಲ್ಲಿ 76 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ತಾಲೂಕು ಆರೋಗ್ಯಾಧಿ ಕಾರಿ ಡಾ| ಉದಯ ಕುಡಚಿ, ಡಾ|ಎಂ.ಎಂ. ನರಸನ್ನವರ ನೇತೃತ್ವದಲ್ಲಿ ಸಿಬ್ಬಂದಿಯವರು ಉತ್ತಮ ಚಿಕಿತ್ಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಹಳ್ಳಿಗಳಲ್ಲಿ ಸಿಪಿಐ ರಮೇಶ ಛಾಯಾಗೋಳ ನೇತೃತ್ವದಲ್ಲಿ ಪೊಲೀಸರು ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಯಶಸ್ವಿಗೊಳಿಸುತ್ತಿದ್ದಾರೆ. ಮಹಾವೀರ ಸಮೂಹ ಸಂಸ್ಥೆ ವತಿಯಿಂದ ಉಚಿತವಾಗಿ ಆಂಬ್ಯುಲೆನ್ಸ್‌, ಬಡಜನರಿಗೆ ಆಹಾರ, ಆರೋಗ್ಯ ಕಿಟ್‌, ಸಿಬ್ಬಂದಿ ವರ್ಗದವರಿಗೆ ಸುರಕ್ಷತಾ ಹಾಗೂ ಆರೋಗ್ಯ ವಿಮೆ ಹಣ ಭರಿಸಿ ಮಾನವೀಯತೆ ಮೆರೆದಿದ್ದಾರೆ. ಬೆಳವಿ ಗ್ರಾಮದ ಸಿಪಿಐ ಡಾ|ಹನಮಂತ ಭಜಂತ್ರಿ ಕುಟುಂಬದವರು 1ಸಾವಿರ ಬಡಜನರಿಗೆ ಆಹಾರಧಾನ್ಯದ ಸಾಮಗ್ರಿ, ಕೊರೊನಾ ಆರೈಕೆ ಕೇಂದ್ರಕ್ಕೆ ಹಣ್ಣು, ಮಾಸ್ಕ್, ಸ್ಯಾನಿಟೈಜರ್‌ ನೀಡಿದ್ದಾರೆ. ಗುರುಶಾಂತೇಶ್ವರ ಸಂಸ್ಥಾನ ಮಠ ಆಂಬ್ಯುಲೆನ್ಸ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next