Advertisement

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

03:13 PM Nov 27, 2021 | Team Udayavani |

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಸಚಿವ ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

Advertisement

ಯಾವ ಜಿಲ್ಲೆಯಲ್ಲಿ ಅರಣ್ಯ ನಿರ್ಮಾಣ ಮಾಡಲು ಭೂಮಿ ಇಲ್ಲವೋ, ಆ ಜಿಲ್ಲೆಯಲ್ಲಿನ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆಗೆ ಸೇರಿದಂತೆ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು, ಅರಣ್ಯ ಇಲಾಖೆಗೆ ವಿಲೀನಕರಣ ಮಾಡದೆ, ಆ ಭೂಮಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಿಂದ ಗಿಡ ಮರಗಳನ್ನು ಬೆಳೆಸಿ ಎಂದು ಸಚಿವರು ರಾಜ್ಯದ ಎಲ್ಲ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ, ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯ ಆಗಿದೆ.  ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇಕಡಾ 70% ಅರಣ್ಯ ಇದೆ‌. ಆದರೆ ವಿಜಯಪುರ, ಬೀದರ್, ಗುಲ್ಬರ್ಗಾ ಸೇರಿದಂತೆ ಅನೇಕ ಜಿಲ್ಲೆಯಲ್ಲಿ 10% ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:ಎತ್ತಿನ ಭುಜ: ಅಧಿಕಾರಿಗಳ ಖಡಕ್ ನಿರ್ಧಾರ; ಮ್ಯಾರಥಾನ್ ರದ್ದು

ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ತಾಪಮಾನದ ಸಮಸ್ಯೆಯ ವೈಪರೀತ್ಯಗಳು ಎಲ್ಲರಿಗೂ ಗೊತ್ತಿರುವ ವಿಷಯ ಆಗಿದೆ, ಹಾಗಾಗಿ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕ ಆಗಿದೆ ಎಂದು ಸಚಿವರು ತಿಳಿಸಿದರು.

Advertisement

ಒಂದು ಕಡೆ ನಮಗೆ ಗೊತ್ತಿಲ್ಲದೆ ಮರ ಗಿಡಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲೆ ಇದೆ. ಇದರಿಂದ ಆಮ್ಲಜನಕ ಪ್ರಮಾಣ ಕಡಿಮೆ ಆಗುತ್ತಿದೆ, ಈಗ ನಮ್ಮ ಯುವಕರು ನೋಡುತ್ತಿರುವ ಸುಂದರವಾದ ಅರಣ್ಯ ಗಿಡ ಮರಗಳನ್ನು, ನಮ್ಮ ಮುಂದಿನ ಪೀಳಿಗೆ ನೊಡುವಂತಾಗಬೇಕು, ಕೇವಲ ಇರುವ ಅರಣ್ಯ ಭೂಮಿ ರಕ್ಷಣೆ ಮಾಡಿದರೆ ಸಾಲದು, ಅರಣ್ಯ ಭೂಮಿ ವೃದ್ಧಿಸುವ ಕಡೆಗೂ ಗಮನ ಹರಿಸಬೆಕಾಗಿದೆ ಎಂದು ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next