ಖಾನಾಪುರ: ಸಮಾಜದಲ್ಲಿ ಒಳ್ಳೆಯ ಮನಸ್ಸಿನಿಂದ ಕಾರ್ಯ ಮಾಡಲು ಹೊರಟರೆ ಮಾತ್ರ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದರು.
ಅವರು ತಾಲೂಕಿನ ಜಾಂಬೋಟಿ ಗ್ರಾಮದ ಜನಕಲ್ಯಾಣ ಟ್ರಸ್ಟ್ ಸಂಚಾಲಿತ ವಿದ್ಯಾ ವಿಕಾಸ ಸಮಿತಿ ವತಿಯಿಂದ ಪುನರ್ ನಿರ್ಮಿತ ಮಾಧ್ಯಮಿಕ ವಿದ್ಯಾಲಯ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು. ಈ ಶಾಲೆ ಪುನರ್ ನಿರ್ಮಾಣ ಮಾಡಲು ಹೊರಟಿರುವುದು ಉತ್ತಮ ಬದಲಾವಣೆಗೆ ಮಾದರಿ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.
ಇಲ್ಲಿ ಕಲಿತ ವಿದ್ಯಾರ್ಥಿಗಳು 15 ವರ್ಷಕ್ಕೆ ಬೆಳಗಾವಿ ಜಿಲ್ಲಾ ಧಿಕಾರಿಗಳಾಗಿ ಬರುವುದರ ಮೂಲಕ ಸಮಾಜದ ಆಸ್ತಿಯಾಗಬೇಕು. ಕೇವಲ ಅಂಕ ಪಡೆಯುವುದಷ್ಟೇ ಅಲ್ಲ, ಜೊತೆಗೆ ಅದನ್ನು ಮೀರಿ ಸಮಾಜಕ್ಕೆ ಕೊಡುಗೆಯಾಗಿ ಬೆಳೆಯಬೇಕು. ನಾನು 4 ಶಾಲೆಗಳಿಗೆ ಭೇಟಿ ನೀಡಿದ್ದು ಎಲ್ಲ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಾಗಬೇಕು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಹುತೇಕ ಎಲ್ಲ ರಾಜ್ಯಗಳು ಮಾಡದಿದ್ದರೂ ನಾವು ಅಭಿಪ್ರಾಯ ಪಡೆದು ಪರೀಕ್ಷೆ ನಡೆಸಿದೆವು. ಇದೀಗ ಇಲ್ಲಿ ಯಾರೂ ಮಾಸ್ಕ ಹಾಕಿಲ್ಲ. ಇದರಿಂದ ಕೊರೊನಾ ಕಡಿಮೆಯಾಗಿದೆ ಎಂದು ಕಂಡು ಬರುತ್ತದೆ ಎಂದರು.
ಇದನ್ನೂ ಓದಿ :ನಿರಾಣಿ ಉದ್ಯಮ ಸಂಸೆಯಿಂದ ಉದ್ಯೋಗ ಸೃಷ್ಟಿ
ಸಮಾರಂಭದಲ್ಲಿ ಮಂಗೇಶ ಬಿಂಡೆ, ಅರವಿಂದ ದೇಶಪಾಂಡೆ, ವಿಶ್ವೇಶ್ವರಯ್ನಾ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಚಂದ್ರಶೇಖರನ್, ಶಿಕ್ಷಣ ಇಲಾಖೆ ಆಯುಕ್ತ ಮೇಜರ ಸಿದ್ದಲಿಂಗಯ್ನಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.