ಮಂಗಳೂರು: ಬಿಜೆಪಿಯ ಯುವ ನಾಯಕ ಪ್ರವೀಣ್‌ಅವರ ಅಂತ್ಯ ಸಂಸ್ಕಾರ ಸಂದರ್ಭ ಜನಾಕ್ರೋಶ ಹಾಗೂ ಕಾರ್ಯಕರ್ತರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಹಾಗೂ ಹತ್ಯೆಯ ದುಷ್ಕೃತ್ಯದ ಹಿಂದಿರುವ ಜೆಹಾದಿ ಶಕ್ತಿಗಳ ಮಟ್ಟ ಹಾಕುವ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿ, ಸುದ್ದಿಗಾರರ ಜತೆ ಮಾತನಾಡಿದರು.
ದುಷ್ಕರ್ಮಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮದ ನಿರೀಕ್ಷೆಯಲ್ಲಿ ಕಾರ್ಯ ಕರ್ತರಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಜೆಹಾದಿ ಶಕ್ತಿಗಳ ಮಟ್ಟಹಾಕುವ ವಿಷಯದಲ್ಲಿ ಸರಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಪ್ರಾಮಾಣಿಕ ಕಾರ್ಯ ಕರ್ತರನ್ನು ಕಳೆದು ಕೊಂಡ ದುಃಖ ನಮಗಿದೆ. ನಾವು ಹೋರಾಟದಿಂದ ಪಕ್ಷದಲ್ಲಿ ಬೆಳೆದು ಬಂದವರಾ ಗಿದ್ದು, ಕಾರ್ಯಕರ್ತರ ನೋವು ಗೊತ್ತಿದೆ ಎಂದರು.
ದುಷ್ಕೃತ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಸಾಂವಿಧಾನಿಕ, ಕಾನೂನು ಚೌಕಟ್ಟುಗಳಡಿ ಕಾರ್ಯಾಚರಣೆ ನಡೆಯಲಿದೆ. ತನಿಖೆ ವಿಷಯದಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಗಲಭೆಯನ್ನೇ ನಮ್ಮ ಮಾನಸಿಕತೆ ಎಂದು ತಿಳಿದುಕೊಂಡ ಪಿಎಫ್‌ಐ ಸಂಘಟನೆಯನ್ನು ಹತ್ತಿಕ್ಕಲಾಗುವುದು. ಪಿಎಫ್‌ಐ ಹಿನ್ನೆಲೆ ಪತ್ತೆ ಹಚ್ಚುವ ಕಾರ್ಯ ನಡೆಯಲಿದೆ. ನೆರೆ ರಾಜ್ಯವನ್ನು ಸಂಪರ್ಕಿಸುವ ಗಡಿ ಬಗ್ಗೆಯೂ ನಿಗಾ ಇರಿಸಲು ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ ಉಪಸ್ಥಿತರಿದ್ದರು.