Advertisement

ಲಾಕ್‌ಡೌನ್ –ಕರ್ಫ್ಯೂ ಬೇಡವೆಂದರೆ‌ ಜನರೇ‌ ಎಚ್ಚರಿಕೆಯಿಂದ ಇರಬೇಕು: ಸಚಿವ ಸುಧಾಕರ್

11:56 AM Apr 06, 2021 | Team Udayavani |

ಬೆಂಗಳೂರು: ಜನರು ಅನಗತ್ಯ ಗುಂಪುಗೂಡುವುದನ್ನು ಬಿಡಬೇಕು. ಜನರಲ್ಲಿ ಉದಾಸೀನ ಹೆಚ್ಚಾಗಿದೆ. ನಾವು ಪದೇ ಪದೆ ಎಚ್ಚರಿಕೆ ಕೊಡುತ್ತಿದ್ದೇವೆ, ಜನರು ನಡವಳಿಕೆ ಸುಧಾರಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನ ಅಪಾಯವಿದೆ. ಲಾಕ್‌ಡೌನ್ ಅಥವಾ ಕರ್ಫ್ಯೂ ಬೇಡ ಎಂದರೆ‌ ಜನರೇ‌ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ 33 ಸಾವಿರ ಹಾಸಿಗೆ ಸಿದ್ಧ ಮಾಡಿದ್ದೇವೆ. ಇದರಲ್ಲಿ 10,083 ಆಕ್ಸಿನೇಟೇಡ್ ಬೆಡ್ ಮಾಡಲಾಗಿದೆ. ಕೋವಿಡ್ ಗಾಗಿ ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ ಎಂದರು.

ಇದನ್ನೂ ಓದಿ:ನಾಳೆ ‘ಪರೀಕ್ಷಾ ಪೆ ಚರ್ಚಾ’ : ಪರೀಕ್ಷೆಗಳು ಜೀವನದ ಕನಸುಗಳ ಅಂತ್ಯವಲ್ಲ : ಪ್ರಧಾನಿ ಮೋದಿ

ನಿನ್ನೆವರೆಗೆ ಒಟ್ಟು 48.5ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ನೀಡುವಲ್ಲಿ ರಾಜ್ಯಕ್ಕೆ ಆರನೇ ಸ್ಥಾನವಿದೆ. ಕೇಂದ್ರ ಆರೋಗ್ಯ ಸಚಿವರು 15 ಲಕ್ಷ ಲಸಿಕೆ ಕಳುಹಿಸಿದ್ದಾರೆ ಎಂದರು.

ನಿನ್ನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ದೇಶದಲ್ಲಿ ಒಂದು ಲಕ್ಷ ಸೋಂಕಿತರು ಪತ್ತೆಯಾಗಿದೆ. ನಮ್ಮಲ್ಲಿ 32 ಜನರು ಕೂಡ ಸಾವನ್ನಪ್ಪಿದ್ದಾರೆ. ಸಾವು ಪ್ರಕರಣಗಳ ಅಧ್ಯಯನ ಮಾಡಲು ಸೂಚಿಸಿದ್ದೇನೆ. ನಿಖರ ಕಾರಣ ತಿಳಿಯಲು ಅಧ್ಯಯನ ಮಾಡುತ್ತಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.

Advertisement

ಇದನ್ನೂ ಓದಿ: ಪ್ರೇಕ್ಷಕರ ಬಗ್ಗೆ ನಮಗೂ ಕಾಳಜಿ ಇದೆ: ಭಯಬಿಟ್ಟು ಬನ್ನಿ!

Advertisement

Udayavani is now on Telegram. Click here to join our channel and stay updated with the latest news.

Next