ಬೆಂಗಳೂರು : ಕೋವಿಡ್ ಪ್ರಮಾಣ ಬೆಂಗಳೂರಿನಲ್ಲಿ ಸಾವಿರ ದಾಟಿದೆ, ರಾಜ್ಯದಲ್ಲಿ ನಿನ್ನೆ ಏಳು ಸಾವಾಗಿದೆ. ಇದರಿಂದಾಗಿ ಜನಸಾಮಾನ್ಯರ ನಡವಳಿಕೆ ಬದಲಾಗಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ರೆ ಅಪಾಯ. ಸೋಂಕು ಬಂದಾಗ ಲಸಿಕೆ ಕೊಡಬಹುದು, ಆದ್ರೆ ಇದೇ ರೀತಿ ಸೋಂಕು ಹೆಚ್ಚಾದ್ರೆ ಕಷ್ಟವಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕು ಹೆಚ್ಚಾದ್ರೆ ಸರ್ಕಾರ ಕೂಡ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ನೀವು ಸುರಕ್ಷಿತವಾಗಿದ್ರೆ ನಿಮ್ಮನ್ನ ನಂಬಿದವರು ಮನೆಯಲ್ಲಿ ಸುರಕ್ಷಿತವಾಗಿರ್ತಾರೆ. ಹಿರಿಯ ನಾಗರೀಕರಿಗೆ ಲಸಿಕೆ ಕೊಡಿಸೋ ಕೆಲಸ ಮಾಡಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.
ಕೋವಿಡ್ ಎರಡನೇ ಅಲೆಯನ್ನು ತಡೆಯಬೇಕಿದೆ, ಯುವಕರ ಅನಗತ್ಯ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸಲಹೆ ನೀಡಿದ್ದಾರೆ. ಕೊರೊನಾ ನಿಯಂತ್ರಣ ಉದ್ದೇಶದಿಂದ ಆಲ್ ಪಾರ್ಟಿ ಮೀಟಿಂಗ್ ಕರೆಯಬೇಕು. ವಿಪಕ್ಷದವರೂ ಕೂಡ ಕೊರೊನಾ ನಿಯಂತ್ರಣಕ್ಕೆ ಸಲಹೆ ನೀಡಬೇಕು ಎಂದು ಸುಧಾಕರ್ ಕೇಳಿಕೊಂಡಿದ್ದಾರೆ.