Advertisement

ಬದಲಾವಣೆ ಏನಿದ್ದರೂ ಅದು ಮುಖ್ಯಮಂತ್ರಿಗಳ ತೀರ್ಮಾನ: ಎಸ್.ಟಿ.ಸೋಮಶೇಖರ್

01:57 PM Apr 07, 2022 | Team Udayavani |

ಮೈಸೂರು: ಸಂಪುಟ ಪುನರ್ ರಚನೆ, ಸಂಪುಟ ವಿಸ್ತರಣೆ ವಿಚಾರವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೇ ಎಲ್ಲವನ್ನೂ ತಿಳಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಉಸ್ತುವಾರಿಗೆ ಪೈಪೋಟಿ ಹೆಚ್ಚಾಗಿದ್ದರೆ ಸಂತೋಷ. ನಾನೇ ಇಲ್ಲಿ ಸದಾ ಇರಬೇಕೆಂದು ಬಯಸಿಲ್ಲ. ನನಗೆ ಮಾತ್ರ ಉಸ್ತುವಾರಿ ಸ್ಥಾನ ಇರಬೇಕೆಂದು ಪಟ್ಟು ಕೂಡ ಹಿಡಿದಿಲ್ಲ. ಬೇರೆಯವರಿಗೆ ಈ ಸ್ಥಾನ ಕೊಟ್ಟರು ಸಂತೋಷ ಎಂದರು.

ಇದನ್ನೂ ಓದಿ:ಚುನಾವಣೆಯ ಗೆಲುವು ಬಿಜೆಪಿಗೆ ಲೂಟಿಗೆ ಸಿಕ್ಕ ಪರವಾನಿಗೆ: ಅಜಯ್ ಮಾಕೆನ್

ಯಡಿಯೂರಪ್ಪ ಅವರು ನನಗೆ ಮೈಸೂರು ಉಸ್ತುವಾರಿ ಸ್ಥಾನ ಕೊಟ್ಟಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೂಡ ಮುಂದುವರಿಸಿದ್ದಾರೆ. ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಬದಲಾವಣೆ ಏನಿದ್ದರು ಅದು ಸಿಎಂ‌ ತೀರ್ಮಾನ ಎಂದು ಸೋಮಶೇಖರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next