Advertisement

ಎಚ್.ಡಿ.ಕೆಗೆ ಸಚಿವ ಶ್ರೀರಾಮುಲು ಎಚ್ಚರಿಕೆ

09:21 AM Sep 21, 2019 | Team Udayavani |

ಬಾಗಲಕೋಟೆ : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬಕ್ಕೆ ಬಗ್ಗೆ ಮಾತನಾಲು ಮಾಜಿ ಸಿಎಂ ಕುಮಾರಸ್ವಾಮಿಗೆ ನೈತಿಕ ಹಕ್ಕಿಲ್ಲ. ರಾಜಕೀಯ ಅವರ ಕುಟುಂಬಕ್ಕೆ ಎಳೆದು ತಂದರೆ ಸುಮ್ಮನಿರಲ್ಲ. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಎಚ್ಚರಿಕೆ ನೀಡಿದ್ದಾರೆ.

Advertisement

ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಮತಿಭ್ರಮಣೆಗೊಂಡಿದ್ದಾರೆ. ಅವರ ಹೇಳಿಕೆಯಿಂದ ಅವರ ಸಂಸ್ಕಾರ ತಿಳಿಸುತ್ತದೆ. ಒಬ್ಬ ಮಾಜಿ ಪ್ರಧಾನಿಯ ಮಗ ಅನ್ನೋದನ್ನು ಮರೆಯಬಾರದು. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಬಾರದು. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು, ಕುಮಾರಸ್ವಾಮಿ ಅವರಿಗೆ ನೈತಿಕತೆ ಇಲ್ಲ. ಬಿಎಸ್‌ವೈ ಬಗ್ಗೆ ಮಾತನಾಡಲು ಯಾವ ರಾಜಕಾರಣಿಗೂ ನೈತಿಕತೆ ಇಲ್ಲ ಎಂದರು.

ಕುಟುಂಬದ ತಂಟೆಗೆ ಹೋಗಬೇಡಿ :
ಯಡಿಯೂರಪ್ಪ ಅಥವಾ ಅವರ ಕುಟುಂಬದವರ ತಂಟೆಗೆ ಹೋಗುವ ಕೆಲಸ ಕುಮಾರಸ್ವಾಮಿ ಮಾಡಬಾರದು. ಇದನ್ನು ನಾನು ಬಹಳ ಸೀರಿಯಸ್ ಆಗಿ ಹೇಳುತ್ತಿದ್ದೇನೆ ಎಂದು ಏಕವಚನದಲ್ಲೇ ಎಚ್ಚರಿಕೆ ನೀಡಿದರು.

40 ವರ್ಷಗಳಿಂದ ರಾಜಕೀಯದಲ್ಲಿ ದುಡಿದ ಯಡಿಯೂರಪ್ಪ ಬಗ್ಗೆ ಮಾತನಾಡುತ್ತೀರಾ. ನೀವೊಬ್ಬ ಸಣ್ಣ ರಾಜಕಾರಣಿ. ಇನ್ನೂ ಹುಡುಗ. ಲಾಸ್ಟ ಬೆಂಚ್‌ನಲ್ಲಿ ಕುಳಿತು, ಮಾಜಿ ಪ್ರಧಾನಿ ಮಗ ಎಂಬ ಕಾರಣಕ್ಕೆ ಸಿಎಂ ಆಗಿದ್ರಿ. ಯಡಿಯೂರಪ್ಪ ಅವರು ಹಾಗಲ್ಲ. ಹೋರಾಟ ಮಾಡಿ ಸಿಎಂ ಆದವರು. ನೆನಪಿಟ್ಟುಕೊಳ್ಳಬೇಕು. ನಿಮ್ಮ ತಂದೆಗೆ ಎಷ್ಟು ಅನುಭವ ಇದೆಯೋ, ಅಷ್ಟೇ ಅನುಭವ ಯಡಿಯೂರಪ್ಪ ಅವರಿಗಿದೆ. ಅವರಷ್ಟೇ ಚತುರತೆಯೂ ಇದೆ ಎಂದು ಹೇಳಿದರು.

ಕೆಟ್ಟ ಸಂಪ್ರದಾಯ ಹಾಕಬೇಡಿ :
ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡುವುದು ನಿಲ್ಲಿಸಬೇಕು. ಇದೇ ರೀತಿ
ಮುಂದುವರೆದರೆ ಕೆಟ್ಟ ಸಂಪ್ರದಾಯ ಹಾಕಿದಂತಾಗುತ್ತದೆ. ಮುಂದಿನ ಪೀಳಿಗೆಗೆ ನೀವು ಉತ್ತರ ಕೊಡಬೇಕಾಗುತ್ತದೆ. ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡಲು ನಾವು ಬಿಡುವುದಿಲ್ಲ. ರಾಜಕಾರಣ ಇರಬಹುದು. ಹೋಗಬಹುದು. ಯಾವುದೂ ಶಾಶ್ವತವಲ್ಲ. ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತರಬಾರದು. ನಿಮ್ಮ ಉದ್ದೇಶ ಏನೇ ಇರಲಿ. ಕುಟುಂಬವನ್ನು ರಾಜಕೀಯಕ್ಕೆ ತರಬೇಡಿ ಎಂದರು.

Advertisement

ಕುಮಾರಸ್ವಾಮಿ ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ. ಅವರಿಗೆ ಶಕ್ತಿ ಇದ್ದರೆ ಸಿಎಂ ಆಗಲಿ. ನಾವು ಬೇಡ ಅನ್ನಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next