ಬಳ್ಳಾರಿ: ರೈತರ ಕೋರಿಕೆಯಂತೆ ಕಾಲುವೆಯಿಂದ ನೀರು ಹರಿಸದ ಕಾರಣ ಬೆಳೆದು ನಿಂತ ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಾಗಿ ಸ್ವತಃ ನಾನೇ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಲುವೆಗೆ ಆದಷ್ಟು ಬೇಗ ನೀರು ಹರಿದು ಬರಲಿದೆ. ಯಾವುದೇ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗದಂತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಧೈರ್ಯ ತುಂಬಿದರು.
ಬುಧವಾರ ಬೆಳಗ್ಗೆ ವೇದಾವತಿ ನದಿಯಲ್ಲಿ ಸ್ನಾನ ಮಾಡಿ, ಭರದಿಂದ ಸಾಗುತ್ತಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೈರದೇವನಹಳ್ಳಿಯ ಎಲ್. ಎಲ್. ಸಿ ಕಾಲುವೆಯ ಪಿಲ್ಲರ್ ದುರಸ್ತಿ ಕಾರ್ಯವನ್ನು ವೀಕ್ಷಿಸಿದರು.
ಇದನ್ನೂ ಓದಿ: ಮಹಾಲಿಂಗಪುರ ಪುರಸಭೆಯ ಆಡಳಿತ ಮಂಡಳಿಯ ಪಟ್ಟಿಯಲ್ಲಿ ಅಧ್ಯಕ್ಷರ ಹೆಸರೇ ಮಾಯ!
ಕಾಲುವೆಯ ದುರಸ್ತಿಯಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರ ಕಾಲುವೆಯಿಂದ ರೈತರ ಜಮೀನುಗಳಿಗೆ ನೀರಿ ಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ರೈತರ ಹಿತಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ರೈತರಿಗೆ ಅಭಯ ನೀಡಿ, ಬಳ್ಳಾರಿ ಗ್ರಾಮೀಣ ಭಾಗದ ರೈತರನ್ನು ಭೇಟಿ ಮಾಡಿ, ಕಷ್ಟಗಳನ್ನು ಆಲಿಸಿದರು.