Advertisement

ತಡರಾತ್ರಿ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ ಸಚಿವ ಶ್ರೀರಾಮುಲು

10:08 AM Jan 25, 2020 | Team Udayavani |

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳಲ್ಲಿನ ಕೆಲ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂದಿಗಳು. ಸರ್ಕಾರದ ಸೌಲಭ್ಯ ಪಡೆದು ಅದನ್ನುಸಮರ್ಪಕವಾಗಿ ಜನರಿಗೆ ತಲುಪಿದೆ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನೆಲ್ಲಾ ಸರಿ ಮಾಡುವುದು ನಮ್ಮ ಉದ್ದೇಶ. ಮಾತ್ರವಲ್ಲದೆ  ಸಚಿವರು ಬರುತ್ತಾರೆ ಎಂಬ ಕಾರಣಕ್ಕೆ ಮೂರ್ನಾಲ್ಕು ದಿನದಿಂದಲೇ ಆಸ್ಪತ್ರೆ ಸ್ವಚ್ಛಮಾಡಲಾಗುತ್ತದೆ. ಈ ಬದಲಾವಣೆ ಪ್ರತಿನಿತ್ಯ ನಡೆಯಬೇಕು. ‌ಇದರಿಂದ ಒಂದಿಷ್ಟಾದರೂ ಬದಲಾವಣೆ ಆಗಬಹುದು ಎಂಬ ಆಸೆ ಇದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Advertisement

ಗುರುವಾರ ತಡರಾತ್ರಿ‌ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ವಾಸ್ತವ್ಯ ಮಾಡಿ ಅವರು ಮಾತನಾಡಿದರು. ನನ್ನಿಂದ ಎಲ್ಲವೂ ಸರಿಯಾಗುತ್ತೆ ಎಂದು ಹೇಳುವುದಿಲ್ಲ. ‌ಆದರೆ,‌ ಪ್ರಯತ್ನ ಮಾಡುತ್ತೇನೆ. ‌ಅದರ ಭಾಗವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ‌ಮೈಸೂರು, ಎಚ್.ಡಿ.‌ಕೋಟೆ ಕಾರ್ಯಕ್ರಮ ಮುಗಿಸಿ ಬರುವಷ್ಟರಲ್ಲಿ ತಡವಾಗಿದೆ. ಆದ್ದರಿಂದ ಆಸ್ಪತ್ರೆ, ವಾರ್ಡ್ ಗಳನ್ನು ವೀಕ್ಷಿಸಿ ಅಲ್ಲಿನ ಸಮಸ್ಯೆ ಆಲಿಸಲು ಸಾಧ್ಯವಾಗಿಲ್ಲ. ಆದರೆ, ಬೆಳಗ್ಗೆ ರೌಂಡ್ಸ್ ಮಾಡುತ್ತೇನೆ ಎಂದರು.

ಪೂರ್ವ ನಿಗಧಿಯಾಗಿದ್ದ ವಾಸ್ತವ್ಯ ಕಾರ್ಯಕ್ರಮಕ್ಕೆ‌ ಸಚಿವರ ಪ್ರವಾಸದ ವೇಳಾಪಟ್ಟಿ ಪ್ರಕಾರ ರಾತ್ರಿ 10.30ಕ್ಕೆ‌ ಆಗಮಿಸಬೇಕಾಗಿತ್ತು. ಆದರೆ,‌‌ ಮೈಸೂರಿನಿಂದ ತಡವಾಗಿ ಆಗಮಿಸಿದ್ದರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣ ಪ್ರವೇಶಿಸಿದಾಗ ಸಮಯ 12.05 ಗಂಟೆಯಾಗಿತ್ತು.  ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕಕರು, ರೋಗಿಗಳು ತಡರಾತ್ರಿವರೆಗೆ ಸಚಿವರಿಗಾಗಿ ಕಾದು ಸ್ವಾಗತಿಸಿದರು.  ಇದೇ ವೇಳೆ ಹಲವರು ಆಸ್ಪತ್ರೆಯ ಸ್ವಚ್ಛತೆ, ಭ್ರಷ್ಟಾಚಾರ, ಸಿಬ್ಬಂದಿಗಳ ನಿರ್ಲಕ್ಷ್ಯ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಸಚಿವರ ಬಳಿ ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next