ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜ್ಯಾಧ್ಯಕ್ಷರ ಬಳಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇನೆ. ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು. ಹೆಚ್ಚಿನ ಮಂದಿ ಬಿಜೆಪಿಗೆ ಕರೆತರಬೇಕು. ಇವೆಲ್ಲವನ್ನೂ ಗಮನಿಸಬೇಕೆಂದು ಸಚಿವ ಶ್ರೀರಾಮುಲು ಹೇಳಿದರು.
ಸಿದ್ದರಾಮಯ್ಯ ಬಗ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಈ ಕುರಿತು ಎಲ್ಲಾ ಸ್ಪಷ್ಟೀಕರಣ ರಾಜ್ಯಾಧ್ಯಕ್ಷ ರಿಗೆ ಕೊಟ್ಟಿದ್ದೇನೆ. ದೇಶದ ಎಲ್ಲೆಡೆ ಅಡ್ಡಾಡುವಾಗ ಪ್ರಧಾನಿ ಮೋದಿ ಕೂಡ ಬಂದಿದ್ದರು. ಮೋದಿ ಬಂದಾಗ ವಿರೋಧ ಮಾಡಿದ್ದವರೂ ಬಿಜೆಪಿಗೆ ಬಂದಿದ್ದಾರೆ. ನಾನು ಸಮಯ ಕೊಟ್ಟಾಗ ಹಿಂದುಳಿದ ಜಾತಿಗಳು ಒಂದಾಗಬೇಕು. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಉಡುಪಿ: ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್, ಕೋಮು ಸೌಹಾರ್ದತೆಗೆ ಆದ್ಯತೆ; ನೂತನ ಎಸ್ಪಿ
ಬೇರೆ ಬೇರೆ ಪಕ್ಷದ ವಿರೋಧಿಗಳು, ಕಾಂಗ್ರೆಸ್ ತೊರೆದು ಬಿಜೆಪಿ ಬರುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದ್ರೆ ಕಾಂಗ್ರೆಸ್ ನಲ್ಲಿ ಕಿರಿ ಕಿರಿ ಕಾಣುತ್ತಿದೆ. ಅದನ್ನು ನೋಡಿದರೆ ಮುಂದೊಂದು ದಿನ ಸಿದ್ದರಾಮಯ್ಯ ಬಿಜೆಪಿಗೆ ಬರುತ್ತಾರೆ ಎನ್ನುವ ಮನೋಭಾವದಿಂದ ಮಾತನಾಡಿದೆ. ಡಿಕೆಶಿ ಅವರ ನಡುವಿನ ಜಗಳ ನೋಡಿ ಇಲ್ಲಿಗೆ ಬರಬಹುದು ಅಂತ ಹೇಳಿದೆ ಎಂದರು.
ಹಿಂದುಳಿದ ಜಾತಿಗಳೆಲ್ಲಾ ಒಗ್ಗೂಡಿಸಬೇಕು. ಬಿಜೆಪಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಿದೆ. ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುವ ಹೇಳಿಕೆ ನನ್ನ ಅರ್ಥ ಅದಲ್ಲ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದು. ಬಿಜೆಪಿ ಎಲ್ಲಿವರೆಗೂ ಇರುತ್ತೋ, ಎಲ್ಲಿವರೆಗೂ ಮೋದಿ ಪ್ರಧಾನಿ ಇರ್ತಾರೋ ಅಲ್ಲಿವರೆಗೂ ಕಾಂಗ್ರೆಸ್ ಅವರು ಗೆಲ್ಲಲ್ಲ. ಬಾದಾಮಿಗೆ ನಾನು ಹೋಗೋದು ತಡವಾಯಿತು, ಹಾಗಾಗಿ ಅವರು ಗೆದ್ದರು. ನಾನು ಕಾಂಗ್ರೆಸ್ ಹೋಗಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ನನ್ನ ಜೀವ ಇರೋವರೆಗೂ ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರ್ತೀನಿ. ಹೊಂದಾಣಿಕೆ ರಾಜಕಾರಣ ನನ್ನ ಜಾಯಮಾನದಲ್ಲಿ ಮಾಡಿಲ್ಲ ಎಂದರು.