Advertisement

ಕೋವಿಡ್ ನಿಂದ ಮೃತಪಟ್ಟವರ ನೆನದು ಕಣ್ಣೀರು ಹಾಕಿದ ಸಚಿವ ಸೋಮಣ್ಣ

05:23 PM Dec 12, 2021 | Team Udayavani |

ಬೆಂಗಳೂರು : ಕೋವಿಡ್ ನಿಂದ ಮೃತಪಟ್ಟವರ ನೆನದು ವಸತಿ ಸಚಿವ ವಿ.ಸೋಮಣ್ಣ ಅವರು ಕಣ್ಣೀರು ಹಾಕಿದ ಘಟನೆ ಭಾನುವಾರ ನಡೆದಿದೆ.

Advertisement

ಗೋವಿಂದರಾಜನಗರ ವಿಧಾನಸಭಾ :ಮಾರುತಿ ಮಂದಿರ ವಾರ್ಡ್ ,ಸಂಗೊಳ್ಳಿ ರಾಯಣ್ಣ ಉದ್ಯಾನವನ ಅವರಣದಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಧನ ಚೆಕ್ ಮತ್ತು ಮಂಜೂರಾತಿ ಆದೇಶ ಪತ್ರ ಗಳನ್ನೂ ವಿ ಸೋಮಣ್ಣರವರು ನೇತೃತ್ವದಲ್ಲಿ ವಿತರಿಸಲಾಯಿತು.

ಸಚಿವ ವಿ.ಸೋಮಣ್ಣರವರು ಮಾತನಾಡಿ, ಕೊರೊನಾ ಎರಡನೇಯ ಅಲೆಯಿಂದ ಮೃತಪಟ್ಟ ಕುಟುಂಬದವರ ನೋವಿಗೆ ಸ್ಪಂದಿಸುವ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ನಿಲುವು, ಕ್ರಮಗಳಿಂದ ಕೊರೊನಾ ಸಾಂಕ್ರಮಿಕ ರೋಗ ಹತೋಟಿಯಲ್ಲಿದೆ. ಕೊರೊನ ಸಾಂಕ್ರಮಿಕ ರೋಗದ ಭಯ ಮತ್ತು ಅಂಜಿಕೆಪಟ್ಟು ಸಾಕಷ್ಟು ಜನರು ಮೃತಪಟ್ಟರು.ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು.ನೋವಿನಲ್ಲಿ ,ಕಣ್ಣೀ ರಿನಲ್ಲಿ ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಬೇಕು ಮತ್ತು ನಿಮ್ಮ ಕುಟುಂಬದ ಜೊತೆಯಲ್ಲಿ ನಾವಿದ್ದೇವೆ ಎಂದು ಅ ಕುಟುಂಬದ ಸಹಾಯಕ್ಕೆ ನಿಂತಿದ್ದೇವೆ ಎಂದರು.

ಬಿ.ಪಿ.ಎಲ್.ಕಾರ್ಡ್ ದಾರರ ಕುಟುಂಬಕ್ಕೆ 1.50 ಲಕ್ಷ ಚಕ್ ಮತ್ತು ಎ.ಪಿ.ಎಲ್.ಕುಟುಂಬದವರಿಗೆ 50ಸಾವಿರ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 65 ಹಾಸಿಗೆ ಸಾಮ್ಯರ್ಥವುಳ್ಳ ಐ.ಸಿ.ಯು.ಆಸ್ಪತ್ರೆ ನಿರ್ಮಿಸಲಾಗಿದೆ ಮತ್ತು ಕಿಡ್ನಿ ಸಂಭಂದಿಸಿದ ರೋಗಿಗಳಿಗೆ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕೊರೊನ ಎರಡನೇಯ ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 70ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಸೋಂಕಿತರಿಗೆ ಮನೆಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಕೋವಿಡ್ 19ರಿಂದ ಮೃತಪಟ್ಟ ತಂದೆ,ತಾಯಿ ಇಲ್ಲದಿರುವ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದರು.

Advertisement

ಭಾರತೀಯ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮಡಿದ ಎಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಿ 2ನಿಮಿಷ ಮೌನಚರಣೆ ಮಾಡಲಾಯಿತು.

ಯುವ ನಾಯಕರಾದ ಡಾ |ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ ,ವಾಗೀಶ್ ರಾಮಪ್ಪ ,ದಾಸೇಗೌಡ ,ಜಯರತ್ನ ,ರೂಪ ಲಿಂಗೇಶ್ವರ್ ಮತ್ತು ಸ್ಲಂ ಬೋರ್ಡ್ ನಿರ್ದೇಶಕರಾದ ಕ್ರಾಂತಿರಾಜು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next