Advertisement

ಕುರ್ಚಿ ತರಲು ತಡವಾಗಿದ್ದಕ್ಕೆ ಕಾರ್ಯಕರ್ತನ ಮೇಲೆ ಕಲ್ಲೆಸೆದ ಸಚಿವ: ವಿಡಿಯೋ ವೈರಲ್‌…

07:48 PM Jan 24, 2023 | Team Udayavani |

ತಮಿಳುನಾಡು: ಕುರ್ಚಿ ತರಲು ತಡ ಮಾಡಿದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ಸಚಿವನೊಬ್ಬ ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ಎಸೆದ ಘಟನೆ ತಮಿಳುನಾಡಿನ ತಿರುವಳ್ಳೂರ್‌ನಲ್ಲಿ ವರದಿಯಾಗಿದೆ.

Advertisement

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಜ.25ರಂದು ಕಾರ್ಯಕ್ರಮವೊಂದಕ್ಕೆ ಆಗಮಿಸುವರಿದ್ದರು. ಈ ಸಂಬಂಧ ತಮಿಳುನಾಡು ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್‌.ಎಂ.ನಾಸರ್‌ ಸಿದ್ಧತೆ ಪರಿಶೀಲಿಸಲು ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕೂರಲು ಕುರ್ಚಿ ತರಲು ತಡ ಮಾಡಿದ ಕಾರಣ ಸಿಟ್ಟೆಗೆದ್ದ ಸಚಿವ, ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಕಲ್ಲು ಎಸೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಾಲತಾಣಗಳಲ್ಲಿಯೂ ಅವರ ವರ್ತನೆಯನ್ನು ಕಟುವಾಗಿ ಟೀಕೆ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next