ಚಿತ್ರದುರ್ಗ: ರಾಮ ಮಂದಿರ ನಿರ್ಮಾಣದ ತಾಂತ್ರಿಕ ತಂಡದಲ್ಲಿ ಚಿತ್ರದುರ್ಗ ಜಿಲ್ಲೆ ಮೂಲದ ಗುಹಾವಟಿ ಐಐಟಿ ನಿರ್ದೇಶಕ ಪ್ರೊ.ಟಿ.ಜಿ. ಸೀತಾರಾಮ್ ಸ್ಥಾನ ಪಡೆದಿರುವುದು ಜಿಲ್ಲೆಯ ಹೆಮ್ಮೆಯ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಗಣರಾಜ್ಯೋತ್ಸವದ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇದನ್ನೂ ಓದಿ:LIVE ದೇಶದಲ್ಲಿಂದು 72ನೇ ಗಣರಾಜ್ಯೋತ್ಸವ ಸಂಭ್ರಮ; ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ
ಗಣರಾಜ್ಯೋತ್ಸವ ಅಂದರೆ ಜನರ ಉತ್ಸವ. ಪ್ರಜಾಪ್ರಭುತ್ವ, ಸಂವಿಧಾನದ ಶಕ್ತಿ ಎಂಬಂತೆ ಪತ್ರಿಕೆ ಹಂಚುವ ಬಾಲಕ ರಾಷ್ಟ್ರಪತಿ, ಸಾಮಾನ್ಯ ತರಕಾರಿ ಮಾರುವ ವ್ಯಕ್ತಿಯ ಮಗಳು ಐಎಎಸ್ ಅಧಿಕಾರಿ ಆಗುತ್ತಾರೆ. ನಮ್ಮಂಥ ಸಾಮಾನ್ಯರು ಮಂತ್ರಿಯಾಗಿದ್ದೇವೆ. ಇದಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದರು.
ಇದನ್ನೂ ಓದಿ: ಕೋವಿಡ್-19 ಕೊನೆಯ ಹಂತದಲ್ಲಿದ್ದೇವೆ ಆದರೆ ಅಲಕ್ಷ್ಯ ಸರಿಯಲ್ಲ: ರಾಜ್ಯಪಾಲ ವಿ.ಆರ್.ವಾಲಾ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಪರಾಕ್ರಮ ದಿನವನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ನಮ್ಮ ಸೇನಾನಿಗಳಿಗೆ ಸಲ್ಲಿಸಿದ ಅತ್ಯುತ್ತಮ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ರಾಧಿಕಾ ಮತ್ತಿತರರು ಇದ್ದರು.