Advertisement

ಕಣಕುಪ್ಪೆ ಗ್ರಾಮ ಅಭಿವೃದ್ಧಿಗೆ ಬದ್ದ

07:06 PM Feb 22, 2021 | Team Udayavani |

ಮೊಳಕಾಲ್ಮೂರು: ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದ ಗಡಿ ಭಾಗದ ಕಣಕುಪ್ಪೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.

Advertisement

ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಣಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ “ಜಿಲ್ಲಾ ಧಿಕಾರಿಗಳ ನಡೆ ಗ್ರಾಮದ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಸತಿ ರಹಿತರಿಗೆ ವಸತಿ ಸೌಲಭ್ಯ, ಪಡಿತರ ಕಾರ್ಡ್‌, ಭಾಗ್ಯಲಕ್ಷ್ಮೀ ಬಾಂಡ್‌, ಕುಡಿಯುವ ನೀರು, ರಸ್ತೆಗಳು, ಬೀದಿದೀಪಗಳು, ಗಂಗಾಕಲ್ಯಾಣ ಸೇರಿದಂತೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸಲಿರುವ ಈ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದೆ. ಈಗಾಗಲೇ ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಗಾಗಿ 2,500 ಮನೆಗಳು ಮಂಜೂರಾಗಿದ್ದು, ಇದರ ಪ್ರಯೋಜನವನ್ನು ಪಡೆದುಕೊಂಡು ಪ್ರಗತಿ ಹೊಂದಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನಂದಿನಿ ದೇವಿ,ಜಿಲ್ಲಾ ಸಮಾಜಕಲ್ಯಾಧಿ ಕಾರಿ ಮಮತಾ, ತಹಶೀಲ್ದಾರ್‌ ಬಿ.ಆರ್‌. ಆನಂದಮೂರ್ತಿ, ಉಪ ತಹಶೀಲ್ದಾರ್‌ ಡಿ. ಮಹಾಂತೇಶ್‌, ಶಿರಸ್ತೇದಾರ ಏಳುಕೋಟಿ, ತಾಪಂ ಕಾರ್ಯನಿರ್ವಹಣಾ ಧಿಕಾರಿ ಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿ ಕಾರಿ ಯುವರಾಜ್‌ ನಾಯ್ಕ, ಬಿಆರ್‌ಸಿ ಹನುಮಂತಪ್ಪ, ತಾಲೂಕು ಸಮಾಜ ಕಲ್ಯಾಣಾಧಿ ಕಾರಿ ಪ್ರೇಮನಾಥ, ಸಿಡಿಪಿಒ ಸವಿತಾ, ತಾಲೂಕು ಆರೋಗ್ಯಾಧಿಕಾರಿ ಡಾ| ಸುಧಾ, ಕೃಷಿ ಇಲಾಖೆಯ ಉಮೇಶ್‌, ಪಶು ಇಲಾಖೆಯ ಡಾ| ತಿಮ್ಮಣ್ಣ, ಕಂದಾಯ ನಿರೀಕ್ಷಕರಾದ ಗೋಪಾಲ್‌, ಪ್ರಾಣೇಶ್‌, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಓಬಣ್ಣ, ಗ್ರಾಮ ಲೆಕ್ಕಾಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಭಾನುವಾರ ಬೆಳಿಗ್ಗೆ ಜಿಲ್ಲಾಧಿ ಕಾರಿ ಕವಿತಾ ಎಸ್‌. ಮನ್ನಿಕೇರಿ ಕಣಕುಪ್ಪೆ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next