Advertisement
ಅವರು ಇಲ್ಲಿನ ಬೆಳಕೆಯಲ್ಲಿ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
Related Articles
Advertisement
ಹಿಂದೆ ಖಾಸಗೀ ಬ್ಯಾಂಕುಗಳು ಉಳ್ಳವರ ಪಾಲಾಗಿದ್ದುದರಿಂದ ಕೇಂದ್ರ ಸರಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಎಲ್ಲರ ಬ್ಯಾಂಕಾಗಿಸಿತು. ನಂತರದ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದ ಸಹಕಾರಿ ಕ್ಷೇತ್ರದಿಂದಾಗಿ ಜನ ಸಾಮಾನ್ಯರು ತಮ್ಮ ತುರ್ತು ಅವಶ್ಯಕತೆಗೆ ಸಹಕಾರಿ ಬ್ಯಾಂಕುಗಳನ್ನು ನಂಬುವಂತಾಗಿದೆ. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆಗೆ ಸ್ಪಂಧಿಸುವ ಸಹಕಾರಿ ಸಂಘಗಳು ಎಲ್ಲಾ ರೀತಿಯ ಸೇವೆಯನ್ನು ನೀಡುವ ಮೂಲಕ ಜನರನ್ನು ತಲುಪಲು ಯಶಸ್ವೀಯಾಗಿವೆ. ಸಹಕಾರಿ ಸಂಸ್ಥೆಗಳು ಜನತೆಗೆ ಅಗತ್ಯತೆ ಇದ್ದಾಗ ತುರ್ತು ಸಹಾಯ ಮಾಡಬೇಕು, ಅಲ್ಲಿ ಯಾವುದೇ ಪಕ್ಷ, ಪಂಗಡಗಳನ್ನು ನೋಡದೇ ಅವರವರ ಅಗತ್ಯತೆಗಳನ್ನು ಗಮನಿಸಬೇಕು. ಪ್ರತಿಯೋರ್ವರೂ ಕೂಡಾ ತಮ್ಮ ಸಂಘಕ್ಕೆ ಬರುವ ಗ್ರಾಹಕರ ಗೌರವನ್ನು ಅವರ ಮನಸ್ಥಿತಿಯನ್ನು ಗೌರವದಿಂದ ಕಂಡಾ ಮಾತ್ರ ಸಂಸ್ಥೆ ಇನ್ನಷ್ಟು ಬೆಳೆಯುತ್ತದೆ ಎನ್ನುವುದಕ್ಕೆ ಈ ಸಂಸ್ಥೇ ಬೆಳೆದಿರುವುದೇ ಉದಾಹರಣೆಯಾಗಿದೆ ಎಂದ ಅವರು ಸಂಘ ತನ್ನ ಲಾಭದ ಒಂದು ಅಂಶವನ್ನು ರೈತರಿಗೆ, ಬಡವರಿ ಒಳಿತಿಗಾಗಿ ಬಳಸಬೇಕು ಎಂದು ಸ್ವಾಮೀಜಿಯವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯ್ಕ, ಬೆಳಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮೊಗೇರ, ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಉಪಾಧ್ಯಕ್ಷ ನಾರಾಯಣ ಜೆ. ನಾಯ್ಕ, ನಿರ್ದೇಶಕರಾದ ವಾಸು ನಾಯ್ಕ, ಕೃಷ್ಣ ಮೊಗೇರ, ಪಾಂಡುರಂಗ ನಾಯ್ಕ, ದೇವಯ್ಯ ನಾಯ್ಕ, ದೇವಾನಂದ ಮೊಗೇರ, ರಮೇಶ ಗೊಂಡ, ಮಹಾದೇವ ನಾಯ್ಕ, ನಾಗೇಶ ನಾಯ್ಕ, ವೆಂಕಟೇಶ ನಾಯ್ಕ, ಲಲಿತಾ ನಾಯ್ಕ, ಜ್ಯೋತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಸುಧೀರ್ಘ ಸೇವೆ ಸಲ್ಲಿಸಿದ್ದ ದಿ. ಎಂ.ಎಸ್.ನಾಯ್ಕ ಬೆಳಕೆ ಅವರ ಹೆಸರಿನ ಸಭಾ ಭವನವನ್ನು ಸಹ ಉದ್ಘಾಟಿಸಲಾಯಿತು. ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು ಹಾಗೂ ಹಾಲಿ ಅಧ್ಯಕ್ಷ ಮಂಜುನಾಥ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ಅವರನ್ನು ಸಹ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಮಂಜುನಾಥ ಲಚ್ಮಯ್ಯ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ಸಂಘದ ವರದಿ ವಾಚಿಸಿದರು.