Advertisement

ಕನ್ನಡ ನಮ್ಮ ಬದುಕಿನ ಉಸಿರಾಗಲಿ: ಸಚಿವೆ ಶಶಿಕಲಾ ಜೊಲ್ಲೆ

12:44 PM Nov 01, 2021 | Team Udayavani |

ವಿಜಯಪುರ: ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯೋಣ, ಕನ್ನಡಾಂಬೆಯ ಸೇವೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.

Advertisement

ಸೋಮವಾರ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೊಲೀಸ್ ಹಾಗೂ ಇತರೆ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಬರೀ ಭಾಷೆ ಅಲ್ಲ. ಅದು ನಮ್ಮ ಬದುಕು, ಸಂಸ್ಕೃತಿ, ಪರಂಪರೆ. ಈ ಪರಂಪರೆ ಉಳಿದರೆ ನಾವು, ನಮ್ಮ ಅಸ್ತಿತ್ವ ಉಳಿಯಲಿದೆ. ಹೀಗಾಗಿ ಕನ್ನಡ ನಮ್ಮ ಬದುಕಿನ ಉಸಿರಾಗಲಿ ಎಂದು ಆಶಿಸಿದರು.

ವಿವಿಧ ಸಂಸ್ಕೃತಿಗಳ ತವರೂರು ನಮ್ಮ ಕರುನಾಡು. ನಮ್ಮ ಕರುನಾಡಿನ ಏಳಿಗೆಗಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಈ ಪವಿತ್ರ ಭಾಷೆಯನ್ನು ಉಳಿಸಿ, ಬೆಳೆಸೋದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ಆಶಿಸಿದರು.

ಇದನ್ನೂ ಓದಿ:ಒಂದಲ್ಲ, ಒಂದು ಲಕ್ಷ ಸಲ ‘ಜೈ ಮಹಾರಾಷ್ಟ್ರ’ ಹೇಳ್ತೀವಿ: ಬೆಳಗಾವಿ ಮಾಜಿ ಮೇಯರ್ ಸರಿತಾ ಸವಾಲು

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರುಣ ಶಹಾಪುರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಜಿಲ್ಲಾಧಿಕಾರಿ ಪಿ. ಸುನಿಲಕುಮಾರ, ಎಸ್ಪಿ ಹೆಚ್.ಡಿ. ಆನಂದಕುಮಾರ, ಜಿ.ಪಂ. ಸಿಇಒ ಗೋವಿಂದರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next