Advertisement

ನನಗೆಷ್ಟೇ ನೋವಾದ್ರೂ ಮುಜುಗರ ತರುವ ಹೇಳಿಕೆ ನೀಡಲಿಲ್ಲ: ಸಚಿವ ಶಂಕರ್‌

07:37 PM Apr 04, 2021 | Team Udayavani |

ರಾಣಿಬೆನ್ನೂರ: ಬಿಜೆಪಿ ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನನಗೆ ಎಷ್ಟು ನೋವಾದರೂ ಪಕ್ಷಕ್ಕೆ ಮುಜುಗರ ತರುವ ಯಾವ ಹೇಳಿಕೆ ನೀಡಲಿಲ್ಲ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್‌. ಶಂಕರ್‌ ಹೇಳಿದರು.

Advertisement

ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಗ್ರಾಮೀಣ ಮಂಡಲ ಮಹಾಶಕ್ತಿ ಕೇಂದ್ರದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಪಕ್ಷೇತರನಾಗಿ ಗೆಲುವು ಸಾಧಿ ಸಿದ ನಂತರ ಮೊದಲು ಯಡಿಯೂರಪ್ಪ ಸಿಎಂ ಆಗಬೇಕೆಂದು ಅವರನ್ನು ಭೇಟಿ ಮಾಡಿದ್ದೇನೆ. ಆದರೆ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ಹೋಗಬೇಕಾಯಿತು. ನಂತರ ಜಾರಕಿಹೊಳಿ ಹಾಗೂ ನಾನು ಸೇರಿಕೊಂಡು ಬಿಜೆಪಿ ಬೆಂಬಲಿಸಿದ್ದೇವೆ ಎಂದರು.

ಅತೀ ಹೆಚ್ಚು ಸದಸ್ಯರನ್ನು ಹೊಂದಿದ ಬಿಜೆಪಿ ವಿಶ್ವದಲ್ಲಿಯೇ ದೊಡ್ಡ ಪಕ್ಷದಾಗಿದೆ. ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರ ಶ್ರಮ ಅಪಾರವಾಗಿದೆ. ಕಾರ್ಯಕರ್ತರು ಸಂಘಟನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಜಿಪಂ ಹಾಗೂ ತಾಪಂ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಬೇಕು ಎಂದರು. ಸಂಘಟನಾ ಉಸ್ತುವಾರಿ ಕಲ್ಲೇಶ ಮಾತನಾಡಿ, ಬೂತ್‌ ಮಟ್ಟದ ಕಾರ್ಯಕರ್ತರು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜತೆಗೆ ಪಕ್ಷದ ಸಂಘಟನೆ ಮಾಡಬೇಕು ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ವಿಶ್ವನಾಥ ಪಾಟೀಲ, ದೀಪಕ ಹರಪನಹಳ್ಳಿ, ರಾಜೇಂದ್ರ ಹಾವೇರಿಯಣ್ಣನವರ, ಪ್ರದೀಪ ಮಳ್ಳೂರ, ಹರೀಶ ರಾಮಲಿಂಗಣ್ಣನವರ, ಬಸವರಾಜ ಹುಲ್ಲತ್ತಿ, ರಾಜೇಂದ್ರ ಬಸೇನಾಯ್ಕರ, ರಾಜು ಅಡಿವೆಪ್ಪನವರ, ಮಂಜಯ್ಯ ಚಾವಡಿ, ಪ್ರಕಾಶ ಹರಿಯಾಳದವರ, ಶಿವಪುತ್ರಪ್ಪ ಹರಿಯಾಳದವರ, ಶಿದ್ಲಿಂಗಗೌಡ ಪಾಟೀಲ, ಸೋಮಣ್ಣ ಮಾಳಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next